Published
12 months agoon
By
Akkare Newsಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಎರಡು ಬ್ಲಾಕ್ ಗಳಾದ ಪುತ್ತೂರು ಬ್ಲಾಕ್ ಮತ್ತು ಉಪ್ಪಿನಂಗಡಿ – ವಿಟ್ಲ ಬ್ಲಾಕ್ನ ಅಧ್ಯಕ್ಷ ಸ್ಥಾನದ ನಿಗದಿತ ಅವಧಿ 3 ವರ್ಷ ಪೂರ್ಣಗೊಂಡಿದ್ದು, ಇನ್ನು ಮುಂದಿನ ಅವಧಿಗೆ ಮುಂದುವರಿಯುವ ಯಾವುದೇ ಇರಾದೆ ನಮ್ಮಲ್ಲಿ ಇಲ್ಲ. ಹೀಗಾಗಿ ನಮ್ಮನ್ನು ಅಧ್ಯಕ್ಷೀಯ ಹುದ್ದೆಯಿಂದ ಬಿಡುಗಡೆಗೊಳಿಸಬೇಕಾಗಿ ಪಕ್ಷದ ವರಿಷ್ಠರಿಗೆ ತಿಳಿಯಪಡಿಸಿರುವುದಾಗಿ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಎಂ.ಬಿ ವಿಶ್ವನಾಥ ರೈ ಮತ್ತು ಡಾ. ರಾಜಾರಾಮ್ ಕೆ.ಬಿ ತಿಳಿಸಿದ್ದಾರೆ.
ರಾಜಾರಾಮ್ ಕೆ.ಬಿಯವರ ಅವಧಿ ಈ ವರ್ಷದ ಜನವರಿ ತಿಂಗಳಿನಲ್ಲೂ, ಎಂ.ಬಿ ವಿಶ್ವನಾಥ ರೈಯವರ ಅಧಿಕಾರ ಅವಧಿ ಈ ತಿಂಗಳ ಪೆಭ್ರವರಿ ತಿಂಗಳಿನಲ್ಲೂ ಮುಕ್ತಾಯಗೊಂಡಿದೆ. ಆದರೇ ಅದೇ ವೇಲೆ ಲೋಕಸಭಾ ಚುನಾವಣೆಯೂ ಎದುರಾದುದರಿಂದ , ಹೊಸ ನಾಯಕತ್ವದಲ್ಲಿ ಪಕ್ಷ ಚುನಾವಣಾ ಚಟುವಟಿಕೆ ನಡೆಸುವುದು ಕಷ್ಟವಾಗಬಹುದೆಂದು ನಾವು ಅದೇ ಹುದ್ದೆಯಲ್ಲಿ ಮುಂದುವರಿದಿದ್ದೇವು. ಈಗ ಚುನಾವಣೆಗಳು ಮುಗಿದಿದ್ದು ಹುದ್ದೆ ಬಿಟ್ಟುಕೊಡಲು ಸಶಕ್ತ ಸಮಯ ಎಂದು ಅವರು ಹೇಳಿದರು.