ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಬ್ರೇಕಿಂಗ್ ನ್ಯೂಸ್

ಅವಧಿ ಮುಗಿದ ಕಾರಣ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಉದ್ದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಲೋಕಸಭಾ ಅಭ್ಯರ್ಥಿಯ ಸೋಲಿಗೂ..ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ:ಬ್ಲಾಕ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ ಹಾಗೂ ಡಾ. ರಾಜಾರಾಮ್.ಕೆ.ಬಿ.

Published

on

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಎರಡು ಬ್ಲಾಕ್ ಗಳಾದ ಪುತ್ತೂರು ಬ್ಲಾಕ್ ಮತ್ತು ಉಪ್ಪಿನಂಗಡಿ – ವಿಟ್ಲ ಬ್ಲಾಕ್ನ ಅಧ್ಯಕ್ಷ ಸ್ಥಾನದ ನಿಗದಿತ ಅವಧಿ 3 ವರ್ಷ ಪೂರ್ಣಗೊಂಡಿದ್ದು, ಇನ್ನು ಮುಂದಿನ ಅವಧಿಗೆ ಮುಂದುವರಿಯುವ ಯಾವುದೇ ಇರಾದೆ ನಮ್ಮಲ್ಲಿ ಇಲ್ಲ. ಹೀಗಾಗಿ ನಮ್ಮನ್ನು ಅಧ್ಯಕ್ಷೀಯ ಹುದ್ದೆಯಿಂದ ಬಿಡುಗಡೆಗೊಳಿಸಬೇಕಾಗಿ ಪಕ್ಷದ ವರಿಷ್ಠರಿಗೆ ತಿಳಿಯಪಡಿಸಿರುವುದಾಗಿ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಎಂ.ಬಿ ವಿಶ್ವನಾಥ ರೈ ಮತ್ತು ಡಾ. ರಾಜಾರಾಮ್ ಕೆ.ಬಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎಂ.ಬಿ ವಿಶ್ವನಾಥ ರೈ ಮತ್ತು ಡಾ. ರಾಜಾರಾಮ್ ಕೆ.ಬಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಪೋಸ್ಟ್ ಗಳು ಹರಿದಾಡುತ್ತಿದ್ದು , ಇದಕ್ಕೆ ಸ್ಪಷ್ಟನೆ ಕೊಡುವ ಉದ್ದೇಶದಿಂದ ಅವರಿಬ್ಬರು ಪತ್ರಿಕಾಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರಿಬ್ಬರು “ ರಾಜೀನಾಮೆ” ಎನ್ನುವ ಪದ ಬಳಕೆ ಮಾಡಿರುವುದು ಸರಿಯಲ್ಲ . ಇದು ರಾಜೀನಾಮೆ ಅಲ್ಲ. ನಮ್ಮ ಅವಧಿ ಮುಗಿದ ಹಿನ್ನಲೆಯಲ್ಲಿ , ಯುವ ನಾಯಕತ್ವಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಮ್ಮನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕಾಗಿ ಪಕ್ಷದ ವರಿಷ್ಠರಿಗೆ ಈ ಹಿಂದೆಯೆ ತಿಳಿಸಿರುವುದಾಗಿಯೂ ಸ್ಪಷ್ಟ ಪಡಿಸಿದರು.

 

ರಾಜಾರಾಮ್ ಕೆ.ಬಿಯವರ ಅವಧಿ ಈ ವರ್ಷದ ಜನವರಿ ತಿಂಗಳಿನಲ್ಲೂ, ಎಂ.ಬಿ ವಿಶ್ವನಾಥ ರೈಯವರ ಅಧಿಕಾರ ಅವಧಿ ಈ ತಿಂಗಳ ಪೆಭ್ರವರಿ ತಿಂಗಳಿನಲ್ಲೂ ಮುಕ್ತಾಯಗೊಂಡಿದೆ. ಆದರೇ ಅದೇ ವೇಲೆ ಲೋಕಸಭಾ ಚುನಾವಣೆಯೂ ಎದುರಾದುದರಿಂದ , ಹೊಸ ನಾಯಕತ್ವದಲ್ಲಿ ಪಕ್ಷ ಚುನಾವಣಾ ಚಟುವಟಿಕೆ ನಡೆಸುವುದು ಕಷ್ಟವಾಗಬಹುದೆಂದು ನಾವು ಅದೇ ಹುದ್ದೆಯಲ್ಲಿ ಮುಂದುವರಿದಿದ್ದೇವು. ಈಗ ಚುನಾವಣೆಗಳು ಮುಗಿದಿದ್ದು ಹುದ್ದೆ ಬಿಟ್ಟುಕೊಡಲು ಸಶಕ್ತ ಸಮಯ ಎಂದು ಅವರು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version