Published
12 hours agoon
By
Akkare Newsಮಂಗಳೂರು: ರೌಡಿಶೀಟರ್ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಇದರ ನಡುವೆ ಆರೋಪಿ ನೌಷದ್ ಮೇಲೆ ಜೈಲಿನಲ್ಲೇ ದಾಳಿ ಯತ್ನ ನಡೆದಿದೆ.
ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಹಲವಾರು ಖೈದಿಗಳಿಂದ ನೌಷದ್ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಸಿಕ್ಕ ಸಿಕ್ಕ ವಸ್ತುಗಳಿಂದ ನೌಷಾದ್ ಮೇಲೆ ದಾಳಿಯಾಗಿದೆ ಎನ್ನಲಾಗಿದೆ.
ನೌಷದ್ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡಿತ್ತು. ಹೀಗಾಗಿ ಕಾನೂನು ಪ್ರಕ್ರಿಯೆ ಮುಗಿಸಲು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಪೊಲೀಸರು ಮಂಗಳೂರಿನಿಂದ ಮೈಸೂರು ಜೈಲಿಗೆ ನೌಷಾದ್ ಸ್ಥಳಾಂತರಿಸಲು ಮುಂದಾಗಿದ್ದರು. ಇದರ ನಡುವೆ ಮಂಗಳೂರು ಜೈಲಿನಲ್ಲಿ ಆಪ್ತರನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿದ್ದ ಕಾರಣ ಮಂಗಳೂರು ಜೈಲಿಗೆ ನೌಷಾದ್‌ನ ಕರೆತರಲಾಗಿತ್ತು. ಕಾದು ಕುಳಿತಿದ್ದ ಇತರ ಖೈದಿಗಳು ನೌಷಾದ್ ಮೇಲೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ಆದರೆ ಪೊಲೀಸರು ಮದ್ಯಪ್ರವೇಶದಿಂದ ನೌಷಾದ್ ಪಾರಾಗಿದ್ದಾರೆ.