Published
5 months agoon
By
Akkare Newsಕಡಬ: ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು, ಹೆಡ್ ಕಾನ್ಸ್ಟೇಬಲ್ ಗಳು,ಎ ಎಸ್ ಐ ಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿದೆ.
ಈ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣೆಯಿಂದ ಒಟ್ಟು ಒಂಭತ್ತು ಪೊಲೀಸರು ವರ್ಗಾವಣೆಯಾಗಿ ದ್ದು ಈ ಪೈಕಿ ಆರು ಪೊಲೀಸರು ಕಡಬ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಕಡಬ ಠಾಣೆಗೆ ವರ್ಗಾವಣೆಯಾಗಿರುವ ಪೊಲೀಸರು:
ಎ. ಎಸ್. ಐ ಕರುಣಾಕರ ಬಿ.ಎನ್ , ರೋಹಿತೇಶ್ವರ , ಬಸವರಾಜ್ ಎಚ್ ವಂದಲ್, ವಿಠ ಮಳಿಯಪ್ಪ, , ಅರವಿಂದ್ ಚೌಹನ್, ಮಹಿಳಾ ಕಾಸ್ಟೇಬಲ್ ಮಹಾಲಕ್ಷ್ಮೀ ಯಲವಟ್ಟಿ ಕಡಬಕ್ಕೆ, ನಿತೀಶ್ ವಿ ಶೆಟ್ಟಿ, ದಯಾನಂದ ಬೆಳ್ಳಾರೆಗೆ, ಕುಮಾರಸ್ವಾಮಿ ಉಪ್ಪಿನಂಗಡಿಗೆ ವರ್ಗಾವಣೆಯಾಗಿದ್ದಾರೆ
ಜಿಲ್ಲೆಯಲ್ಲಿ ಒಟ್ಟು 198 ಮಂದಿ ಪೊಲೀಸರು ಈ ಪ್ರಕ್ರಿಯೆ ಮೂಲಕ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎಸ್ ಪಿ ಕಚೇರಿಯಲ್ಲಿ ಎಲ್‌ಇಡಿ ಪರದೆ ಮೂಲಕ ಹುದ್ದೆ ಖಾಲಿ ಇರುವ ಠಾಣೆಗಳ ವಿವರವನ್ನು ನೀಡಿ ಸ್ಥಳಗಳ ಬಗ್ಗೆ ಹಿರಿಯ ಅಧಿಕಾರಿಗಳು ವರ್ಗಾವಣೆಗೊಳ್ಳಲಿರುವ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗಿತ್ತು