Published
4 months agoon
By
Akkare Newsಪುತ್ತೂರು: ಪುತ್ತೂರು ಕೃಷ್ಣನಗರದ ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘವನ್ನು ಆಗಸ್ಟ್ 10ರಂದು ರಚಿಸಲಾಯಿತು.
ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸೌಮ್ಯಶ್ರೀ ಶಿವಪ್ರಸಾದ್ ಹೆಗ್ಡೆ ,ಉಪಾಧ್ಯಕ್ಷರಾಗಿ ಕಾವ್ಯ ಕೆ ,ಕಾರ್ಯದರ್ಶಿಯಾಗಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸವಿತಾ ರವರು ಆಯ್ಕೆಯಾದರು. ಹಾಗೂ ಸದಸ್ಯರಾಗಿ ಯೋಗೀಶ್, ಸುಮಲತಾ, ಅಶ್ವಿನಿ ,ರಾಧಿಕಾ ಹರೀಶ್ ಕೆ ತೆಂಕಪಾಡಿ ಇವರು ಆಯ್ಕೆಯಾದರು .
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಯವರು ಸಭೆಯ ಅಧ್ಯಕ್ಷತೆ ವಹಿಸಿದ್ದು ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಿಗೆ ,ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀ ಎ ವಿ ನಾರಾಯಣ ,ಪ್ರಧಾನ ಕಾರ್ಯದರ್ಶಿ ಶ್ರೀ ಗುಡ್ಡಪ್ಪ ಗೌಡ ಬಲ್ಯ ರವರು ಶಾಲೆಯ ನಿಯಮ ಹಾಗೂ ಪೋಷಕರ ಪಾತ್ರದ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷರಾದ ಶ್ರೀ ಉಮೇಶ್ ಗೌಡ ಮಳುವೇಲು ಹಾಗು ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಗೌಡ ಕಳುವಾಜೆ ಉಪಸ್ಥಿತರಿದ್ದು ಶುಭ ಕೋರಿದರು.
ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ ಸ್ವಾಗತಿಸಿ ಶಾಲೆಯ ಶೈಕ್ಷಣಿಕ ವಿಷಯಗಳ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.
ಶಿಕ್ಷಕಿ ರೀಮಾ ಲೋಬೊ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ರಾಧಾ ಹಾಗೂ ಕುಮಾರಿ ಪ್ರಕ್ಷುತ ರವರು ಕಾರ್ಯಕ್ರಮ ನಿರೂಪಿಸಿದರು.