Published
2 years agoon
By
Akkare News
ಪುತ್ತೂರು: ಪುತ್ತೂರು ಕೃಷ್ಣನಗರದ ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘವನ್ನು ಆಗಸ್ಟ್ 10ರಂದು ರಚಿಸಲಾಯಿತು.
ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸೌಮ್ಯಶ್ರೀ ಶಿವಪ್ರಸಾದ್ ಹೆಗ್ಡೆ ,ಉಪಾಧ್ಯಕ್ಷರಾಗಿ ಕಾವ್ಯ ಕೆ ,ಕಾರ್ಯದರ್ಶಿಯಾಗಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸವಿತಾ ರವರು ಆಯ್ಕೆಯಾದರು. ಹಾಗೂ ಸದಸ್ಯರಾಗಿ ಯೋಗೀಶ್, ಸುಮಲತಾ, ಅಶ್ವಿನಿ ,ರಾಧಿಕಾ ಹರೀಶ್ ಕೆ ತೆಂಕಪಾಡಿ ಇವರು ಆಯ್ಕೆಯಾದರು .
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಯವರು ಸಭೆಯ ಅಧ್ಯಕ್ಷತೆ ವಹಿಸಿದ್ದು ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಿಗೆ ,ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ ಸ್ವಾಗತಿಸಿ ಶಾಲೆಯ ಶೈಕ್ಷಣಿಕ ವಿಷಯಗಳ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.
ಶಿಕ್ಷಕಿ ರೀಮಾ ಲೋಬೊ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ರಾಧಾ ಹಾಗೂ ಕುಮಾರಿ ಪ್ರಕ್ಷುತ ರವರು ಕಾರ್ಯಕ್ರಮ ನಿರೂಪಿಸಿದರು.