Connect with us

ಇತರ

ಕೊಂಬೆಟ್ಟು ಪ್ರೌಢಶಾಲೆಯ ಮೌಲ್ಯ ಯು. ಜಿಲ್ಲಾ ಮಟ್ಟಕ್ಕೆ ಆಯ್ಕೆ

Published

on

ಪುತ್ತೂರು:ದಿನಾಂಕ 13.12.2025 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರೌಢಶಾಲಾ ವಿಭಾಗದ ಮೌಲ್ಯ ಯು.ಪಿ ಇವರು ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಭರತನಾಟ್ಯ ಸ್ಪರ್ಧೆಯಲ್ಲಿ ಇದೇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸ್ತುತಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಇದೇ ತಿಂಗಳ 22ನೇ ತಾರೀಕಿನಂದು ಮೂಡುಬಿದರೆ ತಾಲೂಕಿನ ಸಂತ ಥೋಮಸ್ ವಿದ್ಯಾಸಂಸ್ಥೆ ಆಲಂಗಾರು ಇಲ್ಲಿ ನಡೆಯುವ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮೌಲ್ಯ ಇವರು ಪುತ್ತೂರು ತಾಲೂಕನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ.

 

ಇವರು ಕೆಮ್ಮಾಯಿ ಪಲಸಡ್ಕ ನಿವಾಸಿ ಶ್ರೀಮತಿ ಉಷಾ ಎನ್ ಹಾಗೂ ಉದಯ ಕೆ. ದಂಪತಿಗಳ ಪುತ್ರಿಯಾಗಿದ್ದಾರೆ.
ಸುತ್ತಿ ಇವರು ಬನ್ನೂರು ನಿವಾಸಿ ಶ್ರೀಮತಿ ಜಯಲಕ್ಷ್ಮಿ ಹಾಗೂ ಸಂತೋಷ್ ದಂಪತಿಗಳ ಪುತ್ರಿಯಾಗಿದ್ದು ಪ್ರಸ್ತುತ ಕೊಂಬೆಟ್ಟು ಪ್ರೌಢಶಾಲೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಇಬ್ಬರೂ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version