Connect with us

ಶಾಲಾ ಚಟುವಟಿಕೆ

ಸಾಂದೀಪನಿಯಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಸಮಾರಂಭ:

Published

on

ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭವು ದಿನಾಂಕ 06-07-26ನೇ ಸೋಮವಾರ ದಂದು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಮುಖ್ಯ ಅತಿಥಿಯಾಗಿ ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯ, ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ರವರು ಉಪಸ್ಥಿತರಿದ್ದರು.

ಸಂಸತ್ತಿನ ಪ್ರಥಮ ಸಮಾವೇಶದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ರವರು ಶಾಲಾ ನಾಯಕ ಪ್ರತೀಕ್ ಟಿ 10ನೇ ತರಗತಿ ಮತ್ತು ಉಪ ನಾಯಕ ವಿಧಾತ್ ರೈ 9ನೇ ತರಗತಿ ಹಾಗೂ ಸಂಪುಟ ದರ್ಜೆ ಸಚಿವರಿಗೆ , ಸಹಾಯಕ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಶಾಲಾ ಸಂಸತ್ತಿನ ಸಭಾಪತಿಯಾಗಿ ಪೃಥ್ವಿ ಕೃಷ್ಣ ಶರ್ಮಾ ಕೆ 10ನೇ ತರಗತಿ, ಶಿಕ್ಷಣ ಸಚಿವರಾಗಿ ಜಾಗೃತಿ ವಿ ಎನ್ 10ನೇ ತರಗತಿ, ಶಿಸ್ತು ಸಚಿವೆ ಯಾಗಿ ಸಾನಿಧ್ಯ 10ನೇ ತರಗತಿ, ಸಾಂಸ್ಕೃತಿಕ ಸಚಿವರಾಗಿ ತರುಣ್ 10ನೇ ತರಗತಿ, ಶುಚಿತ್ವ ಸಚಿವರಾಗಿ ಪ್ರಾಜ್ಞಾ ಶರ್ಮ 10ನೇ ತರಗತಿ, ಕ್ರೀಡಾ ಸಚಿವರಾಗಿ ಪ್ರಜ್ವಲ್ ಕೆ ಆರ್ 10ನೇ ತರಗತಿ, ತೋಟಗಾರಿಕ ಸಚಿವರಾಗಿ ಸುಪ್ರೀತ್ 10ನೇ ತರಗತಿ, ನೀರಾವರಿ ಸಚಿವರಾಗಿ ಪ್ರಥಮ್ ಕಾಯರ್ಗ 10ನೇ ತರಗತಿ, ಆರೋಗ್ಯ ಸಚಿವೆಯಾಗಿ ಪ್ರಾಪ್ತಿ ಪುತ್ತಿಲ 10ನೇ ತರಗತಿ, ಭಜನಾ ಸಚಿವರಾಗಿ ಸಾಯಿ ಸಂಚಿತ್, ಆಹಾರ ಸಚಿವರಾಗಿ ಧ್ಯಾನ್ ರೈ 10ನೇ ತರಗತಿ ಆಯ್ಕೆಯಾಗಿರುತ್ತಾರೆ. ಬಳಿಕ ಮುಖ್ಯೋಪಾಧ್ಯಾಯರು ಸದನವನ್ನು ಉದ್ದೇಶಿಸಿ ಮಾತನಾಡುತ್ತಾ ಶಾಲಾ ನಿಯಮ, ವಿದ್ಯಾರ್ಥಿ ಮುಖಂಡರ ಜವಾಬ್ದಾರಿಯ ಬಗ್ಗೆ ತಿಳಿಸಿದರು.

ನಂತರ ಮುಖ್ಯ ಅತಿಥಿಗಳಾದ ಶಾಲಾ ಕೋಶಾಧಿಕಾರಿ ಶ್ರೀ ಹರೀಶ್ ಪುತ್ತೂರಾಯರು ಎಲ್ಲರಿಗೂ ಶುಭಾಶಯ ತಿಳಿಸುತ್ತಾ ಮಾತನಾಡಿದ ಅವರು ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆ ಹೇಗೆ ನಡೆಯುತ್ತದೆ ಎಂದು ಅನುಭವ ಇದಾಗಿದೆ. ಯಾವುದೇ ಸಂದರ್ಭ ದಲ್ಲಿ ಶಾಲೆಯ ನಿಯಮಕ್ಕೆ ವಿರುದ್ಧವಾಗಿ ನಡೆಯದೆ ನಿಮ್ಮ ನಿಮ್ಮ ವಿಭಾಗದ ಜವಾಬ್ದಾರಿ ಯನ್ನು ಅರಿತು ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮುಂದೆ ಸಾಗಿ ಎಂದರು. ನಂತರ ಮುಖ್ಯ ಅಥಿತಿಗಳಾದ ಶಾಲಾ ಕಾರ್ಯದರ್ಶಿ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯರು ಮಾತನಾಡುತ್ತಾ ಚುನಾಯಿತ ಮಂತ್ರಿಗಳು ನಿಮ್ಮ ನಿಮ್ಮ ಹುದ್ದೆಯ ಚೌಕಟ್ಟಿನಲ್ಲಿ ಉತ್ತಮ ಸೇವೆ ಕೊಡಬೇಕು. ನಾಯಕ ಸರಿಯಾದ ಜವಾಬ್ದಾರಿ ನಿರ್ವಹಿಸಿ ಅದರ ಜೊತೆಗೆ ವಿದ್ಯಾರ್ಥಿಗಳ ಜವಾಬ್ದಾರಿ, ಶಿಸ್ತುಪಾಲನೆಯ ಬಗ್ಗೆ ವಿವರಿಸಿದರು.

ಗವರ್ನರ್ ಸ್ಥಾನವನ್ನು ನಿರ್ವಹಿಸಿದ ಶಾಲಾ ಅಧ್ಯಕ್ಷರು ಸಚಿವರಿಗೆ ಪದಗ್ರಹಣವನ್ನು ನೆರವೇರಿಸುತ್ತಾ ಶ್ರೀ ಜಯರಾಮ ಕೆದಿಲಾಯ ಶಿಬರ ರವರು ಮಾತನಾಡಿ ಇವತ್ತಿನ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಎಲ್ಲರಿಗೂ ಒಳ್ಳೆಯದಾಗುವ ಹಾಗೆ ಉತ್ತಮ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಿ ಶಾಲೆಗೆ ಮತ್ತು ದೇಶಕ್ಕೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು. ವಿದ್ಯಾರ್ಥಿನಿಯರಾದ ಅಹಲ್ಯ ಬನಾರಿ ಹಾಗೂ ಗಾನವಿ ಪ್ರಾರ್ಥಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಸಮೃದ್ಧಿ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ದಾನ್ವಿ ಶೆಟ್ಟಿ. ಧನ್ಯವಾದ ಪ್ರತೀಕ್ ನೆರವೇರಿಸಿದರು. ಶಾಲಾ ಸಹ ಶಿಕ್ಷಕಕರಾದ ಶ್ರೀ ಆನಂದ್ ಆರ್ , ಶ್ರೀ ಸುಚೇತ್ ಎಂ , ಶ್ರೀಮತಿ ಸೌಮ್ಯ ಎ ಎಂ ಕಾರ್ಯಕ್ರಮ ನಿರ್ವಹಿಸಿ ಸಂಸತ್ತಿನ ಸಮಾವೇಶವನ್ನು ಸಂಯೋಜಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version