Published
7 months agoon
By
Akkare News
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಮಂಗಳೂರಿನ ಶಕ್ತಿ ವಸತಿಯುತ ಸಂಸ್ಥೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
೧೦ನೇ ತರಗತಿಯ ಸಮೃದ್ ಎಲ್. ಶೆಟ್ಟಿ ಇವರು ೧೭ರ ವಯೋಮಾನದ ಬಾಲಕರ ವಿಭಾಗದಲ್ಲಿ ೧೦೦ ಮೀಟರ್ ಫ್ರೀ ಸ್ಟೈಲ್ ಪ್ರಥಮ, ೨೦೦ ಮೀಟರ್ ಫ್ರೀ ಸ್ಟೈಲ್ ಪ್ರಥಮ ಹಾಗೂ ೨೦೦ ಮೀಟರ್ ಬ್ಯಾಕ್ ಸ್ಟೋಕ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೯ನೇ ತರಗತಿಯ ಅನಿತೇಜ್ ಮಧುಸೂದನ್ ಸಾಲೆ ೫೦ ಮೀ ಬ್ಯಾಕ್ ಸ್ಟೋಕ್ ಪ್ರಥಮ, ೧೦೦ಮಿ ಬ್ಯಾಕ್ ಸ್ಟೋಕ್ ದ್ವಿತೀಯ ಮತ್ತು ೮೦೦ ಮೀಟರ್ ಫ್ರೀ ಸ್ಟೈಲ್ ದ್ವಿತೀಯ ಸ್ಥಾನ ಹಾಗು ೯ನೇ ತರಗತಿಯ ಲಲನ್ ಯು ನಾಯ್ಕ ೪೦೦ ಮೀಟರ್ ಫ್ರೀ ಸ್ಟೈಲ್ ಪ್ರಥಮ ೧೦೦ ಮೀಟರ್ ಬ್ಯಾಕ್ ಸ್ಟೋಕ್ ದ್ವಿತೀಯ ಮತ್ತು ೮೦೦ ಮೀಟರ್ ಫ್ರೀ ಸ್ಟೈಲ್ ತೃತೀಯ ಸ್ಥಾನವನು ಪಡೆದುಕೊಂಡಿದ್ದಾರೆ.
೧೭ ವಯೋಮಾನದ ಬಾಲಕಿಯರ ವಿಭಾಗದಲ್ಲಿ ೯ನೇ ತರಗತಿಯ ಮೆಹಕ್ ರವಿಕುಮಾರ್ ಕೊಟ್ಟಾರಿ ೧೦೦ಮೀ ಬ್ಯಾಕ್ ಸ್ಟೋಕ್ ನಲ್ಲಿ ಪ್ರಥಮ, ೧೦೦ ಮೀಟರ್ ಬಟರ್ ಪ್ಲೇ ಪ್ರಥಮ ಮತ್ತು ೧೦೦ ಮೀಟರ್ ಬ್ಯಾಕ್ ಸ್ಟೋಕ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ೧೪ ವಯೋಮಾನದ ಬಾಲಕರ ವಿಭಾಗದಲ್ಲಿ ೭ನೇ ತರಗತಿಯ ಪ್ರತ್ಯಷ್ ಎಲ್. ಎಸ್ ಗೌಡ ೫೦ ಮೀಟರ್ ಫ್ರೀ ಸ್ಟೈಲ್ ಪ್ರಥಮ ೫೦ ಮೀಟರ್ ಬ್ಯಾಕ್ ಸ್ಟೋಕ್ ಪ್ರಥಮ ಮತ್ತು ೫೦ ಮೀಟರ್ ಪ್ರಥಮ ಮತ್ತು ఐళనల తరగతియ దివాంలో లేట్టి ౧౦౦ మిలటరా పిల ಸ್ಟೈಲ್ ಪ್ರಥಮ ೧೦೦ ಮೀಟರ್ ಪ್ರಥಮ ಮತ್ತು ೫೦ ಮೀಟರ್ ಬ್ಯಾಕ್ ಸ್ಟೋಕ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
೧೪ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ೭ನೇ ತರಗತಿಯ ರೀಶಾ ಪಿ. ಶೆಟ್ಟಿ ೫೦ ಮೀಟರ್ ಬಟರ್ ಪ್ಲೇ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೧೭ರ ವಯೋಮಾನ ಬಾಲಕರ ತಂಡ ಮತ್ತು ೧೪ ವಯೋಮಾನದ ಬಾಲಕರ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಹಾಗೂ ಆಗಸ್ಟ್ ೨೩ರಂದು ನಡೆಯಲಿರುವ ಪ್ರಾಂತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
‘