Connect with us

ಇತರ

ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಯಲ್ಲಿ ಸಾಂದೀಪನಿ ವಿದ್ಯಾಸಂಸ್ಥೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

Published

on

ಪುತ್ತೂರು ಸೆಪ್ಟೆಂಬರ್.08: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪುತ್ತೂರು ಇದರ ವತಿಯಿಂದ ಜರುಗಿದ ಪುತ್ತೂರು ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು(ರಿ) ನರಿಮೊಗರು ಇಲ್ಲಿನ ಸ್ಕೌಟ್ಸ್ ವಿದ್ಯಾರ್ಥಿಗಳ ವಿಭಾಗವು ಪ್ರಥಮ ಸ್ಥಾನ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳ ವಿಭಾಗವು ಪ್ರಥಮ ಸ್ಥಾನವನ್ನು ಗಳಿಸಿರುತ್ತದೆ.

ಸ್ಕೌಟ್ಸ್ ವಿದ್ಯಾರ್ಥಿಗಳಾದ ಸಾಯಿ ಸಂಚಿತ್, ಸರ್ವದ್ ನಾಯಕ್, ವಿಧಾತ್ ರೈ, ಜನಿತ್.ಎಸ್, ಅಖಿಲ್ ಬಿ.ಎ, ಋತ್ವಿಕ್ ಮೊಳೆಯಾರ್, ವಿನೀತ್ ಟಿ‌.ಎಸ್, ನಿಶಾನ್ ಎಂ.ಎಸ್ ಹಾಗೂ
ಬುಲ್ ಬುಲ್ ವಿದ್ಯಾರ್ಥಿಗಳಾದ ಲಕ್ಷ್ಮಿ.ಬಿ, ಚಾರ್ವಿ ಕರಂದ್ಲಾಜೆ, ಸಿಂಧು, ಹಿಮ ವೈ, ಅದಿತಿ ಹೆಚ್.ಜಿ, ವಂಶಿ ಇವರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಸ್ಕೌಟ್ಸ್ ಮಾಸ್ಟರ್ ಗಳಾದ ಶ್ರೀ ಮುರಳಿಕೃಷ್ಣ.ಪಿ , ಶ್ರೀಮತಿ ವಿಜೇತಾ , ಬುಲ್ ಬುಲ್ ಪ್ಲಾಕ್ ಲೀಡರ್ ಶ್ರೀಮತಿ ಅನಿತಾ.ಕೆ ಇವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ ಎಂದು ಸಂಸ್ಥೆಯ ಮುಖೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಇವರು ತಿಳಿಸಿರುತ್ತಾರೆ.

ಸಾಂದೀಪನಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು,ಸಂಚಾಲಕರು, ಸದಸ್ಯರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version