Published
7 months agoon
By
Akkare News
ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣಗೌಡ ಕಳುವಾಜೆರವರು ರಾಷ್ಟ್ರಧ್ವಜಾರೋಹಣವನ್ನೇರಿಸಿ ಮಾತನಾಡುತ್ತಾ, ಭಾರತವು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿ ನಮ್ಮದೇ ಆದ ಆಡಳಿತ ವ್ಯವಸ್ಥೆಗಾಗಿ ಸಂವಿಧಾನವನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ.
ವಿವಿಧ ಧರ್ಮ, ಭಾಷೆ ,ಜಾತಿ ,ಆಹಾರ ಪದ್ಧತಿ ಇದ್ದರೂ ನಾವೆಲ್ಲರೂ ಭಾರತೀಯರು. ನಮ್ಮ ಪೂರ್ವಜರು ಗಳಿಸಿದ ಸ್ವಾತಂತ್ರ್ಯವನ್ನು ನಾವು ಉಳಿಸುವುದು ನಮ್ಮ ಕರ್ತವ್ಯ ಎನ್ನುತ್ತಾ ದಿನದ ಶುಭ ಸಂದೇಶವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಭಾರತೀಯ ಭೂಸೈನ್ಯದ ನಿವೃತ್ತ ಹವಾಲ್ದಾರ್ ಶ್ರೀ ಸುಂದರ ಗೌಡ ನಡುಬೈಲು ಅವರು ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ದೇಶ ನಮ್ಮದು. ಸ್ವಾತಂತ್ರ್ಯ ನಂತರ ನಮ್ಮ ದೇಶದ ಮೇಲೆ ನೆರೆ ದೇಶಗಳು ಅನೇಕ ಬಾರಿ ದಾಳಿ ಮಾಡಿದರೂ ,ನಮ್ಮ ಸೈನಿಕರು ಸಮರ್ಥವಾಗಿ ಅವರನ್ನು ಹಿಮ್ಮಟ್ಟಿಸಿದ್ದಾರೆ. ದೇಶಕ್ಕೆ ಹೊರಗಿನ ವೈರಿಗಳಿಗಿಂತ ದೇಶದೊಳಗಿನ ವೈರಿಗಳು ಅಪಾಯ, ಹಾಗಾಗಿ ನಾವೆಲ್ಲರೂ ಪ್ರಾದೇಶಿಕತೆ, ಧರ್ಮ ಕೋಮು ,ಭಾಷೆ ಇತ್ಯಾದಿಗಳನ್ನು ಬದಿಗೊತ್ತಿ ನಾವೆಲ್ಲರೂ ಈ ದೇಶದ ಸತ್ಪ್ರಜೆಗಳಾಗಿ ಬದುಕಬೇಕು ಎನ್ನುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ಆಡಳಿತ ಸಮಿತಿಯ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ರಾಮಣ್ಣಗೌಡ ಹಲಂಗ, ಶಾಲಾ ಸಂಚಾಲಕರಾದ ಶ್ರೀ ಎ. ವಿ ನಾರಾಯಣ, ಆಡಳಿತ ಅಧಿಕಾರಿಯಾದ ಶ್ರೀ ಗುಡ್ಡಪ್ಪಗೌಡ ಬಲ್ಯ, ಶಾಲೆಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲುವೇಳು ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯಶ್ರೀ ಹೆಗಡೆ, ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಅಮರನಾಥ ಪಟ್ಟೆ ಉಪಸ್ಥಿತರಿದ್ದು ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹವಾಲ್ದಾರ್ ಶ್ರೀ ಸುಂದರ ಗೌಡ ನಡುಬೈಲು ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುಟಾಣಿಗಳಿಂದ ಮುದ್ದು ಕೃಷ್ಣ ವೇಷ ,ರಾಷ್ಟ್ರೀಯ ನಾಯಕರ ಪೋಷಾಕುಧಾರಣೆ, ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಡಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಎಲ್ಲಾ ವಿಜೇತರಿಗೂ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರುಗಳು, ಪೋಷಕರು ಬೋಧಕ -ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡರು. ವಿದ್ಯಾರ್ಥಿನಿಯರಾದ ಶ್ರೀವಿಕಾ.ಪೈ,ಶಿವಾನಿ, ಸುವಿಕ್ಷ ಪ್ರಾರ್ಥಿಸಿದರು. ಶಿಕ್ಷಕಿಯಾರಾದ ಶ್ರೀಮತಿ ರೀಮಾಲೋಬೊ ಸ್ವಾಗತಿಸಿ, ಶ್ರೀಮತಿ ರಾಧಾ.ಪಿ ಮತ್ತು ಕುಮಾರಿ ಪ್ರಕ್ಷುತ ವಂದನಾರ್ಪಣೆಗೈದು, ಶ್ರೀಮತಿ ಸವಿತಾ ಕೆ ಅತಿಥಿಗಳ ಪರಿಚಯವನ್ನು ಮಾಡಿ,ಶ್ರೀಮತಿ ಹಿತಾ ಶ್ರೀ ಮತ್ತು ಶ್ವೇತ .ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಉಳಿದ ಶಿಕ್ಷಕಿಯಾರಾದ ಶ್ರೀಮತಿ ಯಶುಭ ರೈ, ಸುಚಿತ, ಹರ್ಷಿತ, ರಂಜಿತ ರೈ, ತೀರ್ಥ ಶ್ರೀ, ಚಂದ್ರಿಕಾ ಇವರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಗೆ ಎಲ್ಲರಿಗೂ ಸಿಹಿ ತಿಂಡಿಯ ಜೊತೆ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಯಿತು.
‘