Published
3 months agoon
By
Akkare News
ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ ದಿನಾಂಕ 24/11/25 ರಂದು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ 100 ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಾದ ಆರಾಧ್ಯ, ವಿಶಾಖಾ, ಹಂಸಿಕ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಸಭೆಯನ್ನು ಉದ್ದೇಶಿಸಿ ಶಾಲಾ ಉಪಾಧ್ಯಕ್ಷರಾದ ಪ್ರಸನ್ನ ಏನ್ ಭಟ್ ಮಾತನಾಡಿ ಪುಟ್ಟಪರ್ತಿಯಲ್ಲಿ ಅವರಿಗಾದ ಜೀವನಾನುಭವಗಳನ್ನು ತಿಳಿಸುತ್ತಾ ಶುಭ ಕೋರಿದರು.
ಕಾರ್ಯದರ್ಶಿ ಗಳಾದ ಕೃಷ್ಣಪ್ರಸಾದ್ ಕೆದಿಲಾಯ ಮಾತನಾಡಿ ಕೃಷ್ಣನ ತತ್ವಗಳನ್ನು ತಿಳಿಸುತ್ತಾ ಶ್ರದ್ದೆಯಿಂದ, ನಂಬಿಕೆಯಿಂದ ಮಾತ್ರ ಪ್ರತಿಫಲ ಸಿಗುತ್ತದೆ ವಿದ್ಯಾರ್ಥಿಗಳು ಗುರುಹಿರಿಯರಲ್ಲಿ ಹಾಗೂ ವಿದ್ಯೆಯಲ್ಲಿ ತಮ್ಮನ್ನು ತಾವು ಶೃದ್ದೆಯಿಂದ ತೊಡಗಿಸಿಕೊಂಡು ಬಾಬಾರವರ ಅನುಗ್ರಹ ಪಡೆಯುವಂತಾಗಲಿ ಎಂದರು.
ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ ನಮ್ಮ ಜೀವಿತ ಕಾಲದಲ್ಲಿ ಅವಶ್ಯಕತೆಯಿರುವಲ್ಲಿ ಸಹಾಯ ಮಾಡುವುದು, ಪ್ರತಿಫಲ ಭಗವಂತ ನೀಡುತ್ತಾನೆ. ಜೀವನವೆಂಬುದು ಅಷ್ಟು ಸುಲಭವಲ್ಲ ಹಿರಿಯರು ಹೇಳಿದ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ಸಾಗುವಾಗ ಎಡವದ ಹಾಗೆ ಪ್ರಾಮಾಣಿಕ ವ್ಯಕ್ತಿಯಾಗಿ, ತಂದೆ ತಾಯಿಗೆ ಒಳ್ಳೆ ಮಕ್ಕಳಾಗಿ ಬಾಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಶ್ರೀಯುತ ಜಯರಾಮ ಕೆದಿಲಾಯ ಶಿಬರ ರವರು ಮಾತನಾಡುತ್ತಾ ಬಾಬಾರವರು ನಂಬಿದ ಭಕ್ತರಿಗೆ ಅನುಕೂಲಕರವಾದ ಹಾಗೂ ಅದ್ಭುತವಾದ ರಕ್ಷಣೆಯನ್ನು ಕೊಡುತ್ತಾರೆ. ಭಗವಂತನ ಕೆಲಸ ಪೂರ್ಣ ಮಾಡಲು ಮಹಾಪುರುಷರು ಹುಟ್ಟುತ್ತಾರೆ ಅಂತವರಲ್ಲಿ ಬಾಬಾರವರು ಒಬ್ಬರು. ಶ್ರೀ ಭಗವಾನ್ ಸತ್ಯಸಾಯಿ ಬಾಬಾರವರು ಸಮಾಜಸೇವೆ ಹಾಗೂ ಅವರ ಅದ್ಭುತ ಸಹಾಯ ಮಾಡುವ ಮನೋಭಾವನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಬಾಬಾ ರವರ ಅನುಗ್ರಹ ಇರಲಿ ಎಂದು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಶಾಲಾ ಕೋಶಾಧಿಕಾರಿಗಳಾದ ಹರೀಶ್ ಪುತ್ತೂರಾಯರು ಹಾಗೂ
ಶಿಕ್ಷಕ – ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ಸಾಮೂಹಿಕ ಭಜನೆ ಯೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.
ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಪ್ರಮೀಳಾ ನಿರ್ಕಹಿಸಿದರು.
ಶಿಕ್ಷಕರಾದ ಶ್ರೀ ರವಿಶಂಕರ್ ರವರು ಬಾಬಾರವರ ಸಂದೇಶ ವನ್ನು ತಿಳಿಸಿದರು
ಬಂದಂತಹ ಎಲ್ಲರಿಗೂ ಸಿಹಿ ಭೋಜನದ ವ್ಯವಸ್ಥೆ ಇತ್ತು