Connect with us

ಶಾಲಾ ಚಟುವಟಿಕೆ

ಎವಿಜಿ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ:

Published

on

ಪುತ್ತೂರು ಬನ್ನೂರಿನ ಕೃಷ್ಣ ನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಗೆ ಶಾಲೆಯ ಹಿತೈಷಿಯಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಖ್ಯಾತ ಸ್ಯಾಕ್ಸ್ ಫೋನ್ ವಾದಕ ಶ್ರೀ ಎಂ.ವೇಣುಗೋಪಾಲ್ ದೇವಾಡಿಗರವರ ಮಗುವಿನ ಜನ್ಮದಿನದ ಅಂಗವಾಗಿ, ಕೊಡುಗೆಯಾಗಿ ಶಾಲೆಗೆ ಬ್ಯಾಂಡ್ ಸೆಟ್ ಗಳಾದ ಡ್ರಮ್ ,ಬ್ಯಾಂಡ್ , ಟ್ರಂಪೆಲ್ಟ್ಸ್, ಮರಾಕಾಸ್ ಇತ್ಯಾದಿಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವೆಂಕಟರಮಣಗೌಡ ಕಳುವಾಜೆ ವಹಿಸಿದ್ದು, ತಮ್ಮ ಮಗುವಿನ ಜನ್ಮದಿನದ ಶುಭ ಸಂದರ್ಭದಲ್ಲಿ ಊರಿನ ಅನೇಕ ಮಕ್ಕಳಿಗೆ ಉಪಯೋಗವಾಗುವ ಬ್ಯಾಂಡ್ ಸೆಟ್ಟನ್ನು ನಮ್ಮ ಶಾಲೆಗೆ ಕೊಡುಗೆಯಾಗಿ ನೀಡಿದ್ದು ,ಊರಿಗೆ ಆದರ್ಶವನ್ನು ಮೆರೆದ ಶ್ರೀ ಉಮೇಶ್ ದೇವಾಡಿಗ, ಶ್ರೀ ಎಂ ವೇಣುಗೋಪಾಲ ದೇವಾಡಿಗ ಅವರ ಕುಟುಂಬಕ್ಕೆ ಮತ್ತು ಜನ್ಮದಿನವನ್ನು ಆಚರಿಸುತ್ತಿರುವ ಪುಟ್ಟ ಮಗು ತಿಯಾನ್ಶಿ ಗೆ ಶುಭವನ್ನು ಕೋರುತ್ತಾ ಉತ್ತರೋತ್ತವಾಗಿ ಯಶಸ್ಸನ್ನು ಕೋರಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕರಾದ ಶ್ರೀ ಎ ವಿ ನಾರಾಯಣ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ದೇವಿಯವರನ್ನು ಶ್ರೀ ಉಮೇಶ್ ದೇವಾಡಿಗ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ಉಮೇಶ್ ದೇವಾಡಿಗ ಕುಟುಂಬಸ್ಥರಿಗೆ ಶ್ರೀ ಎ ವಿ ನಾರಾಯಣ ರವರು ಮಾತನಾಡಿ ಕೃತಜ್ಞತೆಯನ್ನು ಸಲ್ಲಿಸಿದರು. ಕೊಡುಗೆ ನೀಡಿದ ದಾನಿಗಳ ವತಿಯಿಂದ ಶ್ರೀ ಎಂ ವೇಣುಗೋಪಾಲ್ ರವರು ಮಾತನಾಡಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ತಮ್ಮ ಮನೆತನ ಹಾಗೂ ಎವಿಜಿ ಶಾಲೆಯ ಒಡನಾಟದ ಬಗ್ಗೆ ತಿಳಿಸಿ ಕೃತಜ್ಞತೆ ಸಲ್ಲಿಸಿದರು. ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಪುಟ್ಟ ಮಗುವಿಗೆ ಶಾಲಾ ಶಿಕ್ಷಕಿಯರು ಆರತಿ ಯನ್ನು ಎತ್ತಿ, ತಿಲಕವಿಟ್ಟು ಉಡುಗೊರೆಯನ್ನು ನೀಡಿದರು. ಶಾಲೆಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲುವೇಳು, ಆಡಳಿತ ಅಧಿಕಾರಿಯಾಗಿರುವ ಶ್ರೀ ಗುಡ್ಡಪ್ಪಗೌಡ ಬಲ್ಯ ,ನಿರ್ದೇಶಕರಾದ ಶ್ರೀ ಗಂಗಾಧರ ಗೌಡ ,ಉಪ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರು,ಬೋಧಕ ಬೋಧಕೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಶಿಕ್ಷಕಿಯರಾದ ಶ್ರೀಮತಿ ಶ್ವೇತಾ ರವರು ಸ್ವಾಗತಿಸಿ, ಶ್ರೀಮತಿ ಯಶುಭ ರೈ ವಂದಿಸಿದರು ಹಾಗೂ ಶ್ರೀಮತಿ ಸುಚಿತ ರವರು ಕಾರ್ಯಕ್ರಮವನ್ನು ನಿರೂಪಿಸಿದರು .ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version