Connect with us

ಶಾಲಾ ಚಟುವಟಿಕೆ

ಎವಿಜಿ ಆಂಗ್ಲ ಮಾಧ್ಯಮ ಶಾಲೆ ಡಿಕ್ಷನ್ ಭಿತ್ತಿ ಪತ್ರ ಬಿಡುಗಡೆ ಸುಪ್ತ ಪ್ರತಿಭೆಗಳನ್ನು ಹೊರ ಹಾಕುವ ವೇದಿಕೆ – ಲೋಕೇಶ್ ಬನ್ನೂರು

Published

on

ಬನ್ನೂರು ಮಕ್ಕಳಲ್ಲಿ ಸುಪ್ತ ಪ್ರತಿಭೆಗಳು ಅಡಗಿವೆ.ಅದನ್ನು ಹೊರ ಹಾಕಲು ಈ ಶಾಲೆಯಲ್ಲಿ ತರಲಾದ ಪಾಕ್ಷಿಕ ಪತ್ರಿಕೆ ಸೂಕ್ತ ವೇದಿಕೆಯಾಗಲಿದೆ ಎಂದು ಸುದ್ದಿ ವರದಿಗಾರ ಲೋಕೇಶ್ ಬನ್ನೂರು ಹೇಳಿದರು. ಅವರು ಇಲ್ಲಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಬಿಸಲಾದ ಮಕ್ಕಳ ಪ್ರತಿಭಾ ಅನಾವರಣ ವೇದಿಕೆಯಾದ DICTION-AVG EMS LITPRESS JUNCTION ಎಂಬ ಪಾಕ್ಷಿಕ ಭಿತ್ತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಕ್ಕಳು ಗೋಡೆಯಲ್ಲಿ ಗೀಚಿದಕ್ಕೆ ಅವರಿಗೆ ಗದರಿಸಬಾರದು ಬದಲಾಗಿ ಗೀಚುವಿಕೆಯನ್ನು ಪುಸ್ತಕಕ್ಕೆ ವರ್ಗಾಯಿಸಲು ಪೋಷಕರು ಸಹಕರಿಸಬೇಕೆಂದು ಕಿವಿಮಾತು ಹೇಳಿದರು. ಡಿಕ್ಷನ್ ಎನ್ನುವ ಹೆಸರನ್ನು ಸೂಚಿಸಿದ ಶಾಲೆಯ ನಿರ್ದೇಶಕ ಹಾಗೂ ನ್ಯೂಸ್ ಪುತ್ತೂರು ಚಾನೆಲ್ ಅಧ್ಯಕ್ಷರಾದ ಸೀತಾರಾಮ ಕೇವಳ ಮಾತನಾಡಿ ಶಾಲೆಯಲ್ಲಿ ಸಾಹಿತ್ಯದ ಬೆಳವಣಿಗೆಗೆ ಒದಗಿಸಿದ ಅವಕಾಶವನ್ನು ಮಕ್ಕಳು ಉಪಯೋಗಿಸಿಕೊಂಡು ಹೆಚ್ಚು ಹೆಚ್ಚು ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿ ಶುಭ ಹಾರೈಸಿದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ ಕಳುವಾಜೆ ವೆಂಕಟರಮಣ ಗೌಡರು ಮಾತನಾಡಿ ತೋಚಿದ್ದನ್ನು ಗೀಚು ಎಂಬ ನುಡಿಯಿದೆ. ಅದನ್ನು ಶಿಕ್ಷಕರು ಸರಿಪಡಿಸಿ ಕೊಡುತ್ತಾರೆ. ಮಕ್ಕಳು ತಮಗೆ ಅನಿಸಿದ್ದನ್ನು ಅವರದೇ ವಿಧಾನದಲ್ಲಿ ಗೀಚುವುದು ಮತ್ತು ಈ ಪತ್ರಿಕೆಯ ಮೂಲಕ ಹೊರ ತರಬೇಕು ಎಂದು ಹೇಳಿದರು.

ಈ ಪತ್ರಿಕೆ ಸಂಪಾದಕ ಮಂಡಳಿಯಲ್ಲಿ ಶಿಕ್ಷಕರಾದ ರಾಧಾ ಪಿ ಇವರು ಸಂಪಾದಕರಾಗಿದ್ದು ,ಗೌರವ ಸಂಪಾದಕರಾಗಿ ಕಳುವಾಜೆ ವೆಂಕಟರಮಣ ಗೌಡ, ಪ್ರಧಾನ ಸಂಪಾದಕರಾಗಿ ಸಂಚಾಲಕರಾದ ಎ ವಿ ನಾರಾಯಣ ಸಲಹಾ ಸಮಿತಿ ಸದಸ್ಯರಾಗಿ ಗುಡ್ಡಪ್ಪಗೌಡ ಬಲ್ಯ ಸೀತಾರಾಮ ಕೇವಳ, ಅಮರನಾಥ ಬನ್ನೂರು ಪಟ್ಟೆ ಮತ್ತು ವಿದ್ಯಾರ್ಥಿ ಸಂಯೋಜಕರಾಗಿ ಅದ್ವಿಕ್ ಬಂಜನ್ ,ಆದ್ಯ, ಗನ್ವಿತ್ ,ಅನುಪ್ ರಾಜ್ ಮತ್ತು ಎ ಎನ್ ಜ್ಯೋಶ್ನ ಗೌಡ ಕಾರ್ಯನಿರ್ವಹಿಸಲಿದ್ದಾರೆ.

ಸಂಚಾಲಕರಾದ ಎ ವಿ ನಾರಾಯಣ, ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷರಾದ ಉಮೇಶ್ ಮಳುವೇಲು , ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಮತ್ತು ಪೋಷಕರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ ಸ್ವಾಗತ ಮತ್ತು ನಿರೂಪಿಸಿ,ಹಾಗೂ ಡಿಕ್ಷನ್ ನ ಸಂಪಾದಕರಾದ ಶಿಕ್ಷಕಿ ರಾಧಾ ವಂದನಾರ್ಪಣೆಗಳನ್ನು ನೆರವೇರಿಸಿದರು

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version