Published
7 months agoon
By
Akkare News
ಪುತ್ತೂರು : ದಿ.09/8/25 ರಂದು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ ನರಿಮೊಗರು ನಲ್ಲಿ ರಕ್ಷಾ ಬಂಧನ ಮತ್ತು ಸಂಸ್ಕತ ಸಪ್ತಾಹ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರು,
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ , ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರು ಎಲ್ಲರನ್ನು ಸ್ವಾಗತಿಸಿದರು. ಸಭಾಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರರವರು ಮಾತನಾಡಿ ಸಂಸ್ಕೃತದ ಮಹತ್ವವನ್ನು ತಿಳಿಸುತ್ತಾ ಸಂಸ್ಕೃತ ಕಠಿಣ ಭಾಷೆ ಅಲ್ಲ ಸುಲಭ ಭಾಷೆಯಾಗಿದೆ. ನೇಪಾಳದಲ್ಲಿ ಸಂಸ್ಕೃತವನ್ನು ಆಡುಭಾಷೆಯಾಗಿ ಮಾತನಾಡುತ್ತಾರೆ. ಸಂಸ್ಕೃತ ಎಲ್ಲರಿಗೂ ಪಾಠಶಾಲೆಯಲ್ಲಿ ಮಾತ್ರವಲ್ಲದೆ ನಂತರದ ಕಾಲದಲ್ಲಿ ಕಲಿಯಬಹುದು. ಕಲಿಯಲು ವಯಸ್ಸಿನ ಮಿತಿ ಇಲ್ಲ.
ಹಾಗೂ ನಮ್ಮ ದೇಶವನ್ನು ಉಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಪಡಬೇಕು, ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ರಕ್ಷಾಬಂಧನ ದಿನವನ್ನು ಆಚರಿಸುತ್ತೇವೆ ಎಂದು ರಕ್ಷಾಬಂಧನ ಆಚರಿಸುವ ಉದ್ದೇಶವನ್ನು ಮಕ್ಕಳಿಗೆ ತಿಳಿಸಿದರು.
ಶಾಲಾ ಸಂಸ್ಕೃತ ಶಿಕ್ಷಕರಾದ ಶ್ರೀ ಕುಶಾಲ್ ಸಂಸ್ಕೃತ ಸಪ್ತಾಹದ ಬಗ್ಗೆ ಮತ್ತು ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು. ನಂತರ ವಿದ್ಯಾರ್ಥಿಗಳಿಂದ ರಾಖಿ ಧಾರಣೆ ನಡೆಯಿತು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು.
ಶ್ರೀ ರಮೇಶ್ ಎನ್ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅನಿತಾ ಕೆ ರವರು ಧನ್ಯವಾದ ಗೈದರು. ಶಾಲಾ ವಿದ್ಯಾರ್ಥಿ ಗಳಾದ ಅಹಲ್ಯ ಬನಾರಿ ಮತ್ತು ಮೌಲ್ಯ ರವರು
ಪ್ರಾರ್ಥಿಸಿದರು.