Published
10 hours agoon
By
Akkare News
ಪುತ್ತೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಬಾಡಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ “ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕ-ಶಿಕ್ಷಕ ಮಹಾಸಭೆ”ಯು ದಾನಿಗಳ ವಿಶೇಷ ಕೊಡುಗೆಯೊಂದಿಗೆ ಜೂ 01 ರಂದು ನಡೆಯಿತು .
ದತ್ತಿನಿಧಿ ಪುರಸ್ಕಾರ : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಸ್ಥಾಪಕರಾದ ನಿವೃತ್ತ ಶಿಕ್ಷಕಿ ಲಕ್ಷ್ಮಿ ಆರ್ ರೈ, ನಿರ್ಮಲಾ ಬಿ.ಕೆ, ಜಯರಾಮ ಶೆಟ್ಟಿ, ಅಶೋಕ್ ಶೆಟ್ಟಿ ಸಿದ್ದಕಟ್ಟೆ, ಮೋನಪ್ಪ ಶೆಟ್ಟಿ, ಆದರ್ಶ ಶೆಟ್ಟಿ, ರಾಘವೇಂದ್ರ ರೈ, ಪುಷ್ಪಲತಾ ಮತ್ತು ಮಕ್ಕಳು , ಬೇಬಿ ಶೆಟ್ಟಿ, ಯತೀಶ್ ಶೆಟ್ಟಿ ಬರಮೇಲು, ಮಾಧವ ಬರಮೇಲು. ಹುಸೈನ್ ಕೆ. ಬಿ. ಕೆ , ನಿರಂಜನ ರೈ ಮಠಂತಬೆಟ್ಟು, ಸತ್ಯ ಪ್ರೇಮ ಕೆ. ಶೆಟ್ಟಿ ಇವರು ಸ್ಥಾಪಿಸಿದ “ದತ್ತಿನಿಧಿ” ನಗದು ಪುರಸ್ಕಾರವನ್ನು ಪ್ರತಿ ತರಗತಿಯ ಪ್ರತಿಭಾನ್ವಿತ ಮಕ್ಕಳಿಗೆ ನೀಡಿ ಗೌರವಿಸಲಾಯಿತು.
ಪೋಷಕ-ಶಿಕ್ಷಕ ಮಹಾಸಭೆ: ಹೊಸ ಸಾಲಿನ ಗುಣಾತ್ಮಕ ಶಿಕ್ಷಣದ ಯೋಜನೆಗಳು, ಶಾಲಾ ಅಭಿವೃದ್ಧಿ ಹಾಗೂ ನಿಯಮಾವಳಿಗಳ ಕುರಿತು ಪೋಷಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ,ದಾನಿ ಡೆನ್ನಿಸ್ ಮಸ್ಕರೇನಸ್, ವಿಕ್ರಂ ಶೆಟ್ಟಿ ಅಂತರ, ಭಾಸ್ಕರ್ ಕೋಡಿಂಬಾಳ, ಹುಸೈನ್ ಕೆ.ಬಿ.ಕೆ, ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಉಲ್ಲಾಸ್ ಕೋಟ್ಯಾನ್, ದತ್ತಿನಿಧಿ ಸ್ಥಾಪಕಿ ನಿವೃತ್ತ ಶಿಕ್ಷಕಿ ಲಕ್ಷ್ಮೀ ಹಾಗೂ SDMC ಉಪಾಧ್ಯಕ್ಷೆ ಸ್ಪೂರ್ತಿ ರೈ ಉಪಸ್ಥಿತರಿದ್ದರು.
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ನಿಡ್ಯ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ವಂದನಾರ್ಪಣೆಗೈದರು. GPT ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಹಳೆವಿದ್ಯಾರ್ಥಿ ಸಂಘ ಸದಸ್ಯರು , ಪೋಷಕರು, ದಾನಿಗಳು, ಅಕ್ಷರ ದಾಸೋಹ ಸಿಬ್ಬಂದಿ, ಊರ ನಾಗರಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.“ಶಿಕ್ಷಣವೇ ಶಕ್ತಿ, ಶಾಲೆಯತ್ತ ಬನ್ನಿ” ಮತ್ತು “ಮಕ್ಕಳ ಕೈಗೆ ಪುಸ್ತಕ ನೀಡೋಣ, ಜ್ಞಾನದ ದೀವಿಗೆಯನ್ನು ಬೆಳಗಿಸೋಣ” ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.