Published
6 months agoon
By
Akkare News
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದು, ತನಗೆ ಕಲಿಸಿದ ಶಿಕ್ಷಕರನ್ನು ನೆನೆದುಕೊಂಡು ತನ್ನ ಬೆಳವಣಿಗೆಯಲ್ಲಿ ಗುರುಗಳ ಪಾತ್ರವನ್ನು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಅಮರನಾಥ ಪಟ್ಟೆ ರವರು ಮಾತನಾಡಿ ದಿನದ ಮಹತ್ವದ ಸಂದೇಶವನ್ನು ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಸೌಮ್ಯ ಶ್ರೀ ಹೆಗಡೆ ವಿದ್ಯಾರ್ಥಿ ಅನುಪ್ ರಾಜ್ ಸಾಂದರ್ಭಿಕವಾಗಿ ಮಾತನಾಡಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರಿಗೆ ಶಾಲು ಹಾಗೂ ಗುಲಾಬಿಯನ್ನು ನೀಡಿ ಅಭಿನಂದಿಸಲಾಯಿತು. ಶಿಕ್ಷಕರಿಗೆ ವಿವಿಧ ಮನೋಲ್ಲಾಸ ಆಟಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಆಡಳಿತಮಂಡಳಿಯ ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ ಪ್ರಧಾನ ಕಾರ್ಯದರ್ಶಿ ಶಾಲೆಯ ಆಡಳಿತ ಅಧಿಕಾರಿ ಶ್ರೀ ಗುಡ್ಡಪ್ಪ ಗೌಡ ಬಲ್ಯ ,ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಳುವೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಗಂಗಾಧರ ಗೌಡ ,ಸೀತಾರಾಮ ಕೇವಳ, ಶ್ರೀಮತಿ ಪ್ರತಿಭಾ ದೇವಿ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ,ಬೋಧಕ- ಬೋಧಕೇತರ ವೃಂದ, ವಿದ್ಯಾರ್ಥಿ -ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಶಿವಾನಿ ,ಆನ್ವಿ ಸುವೀಕ್ಷ ಪ್ರಾರ್ಥಿಸಿ,ಅದ್ವಿತಿ ಬಂಜನ್ ಸ್ವಾಗತಿಸಿ ,ಗನ್ವಿತ್ ಧನ್ಯವಾದ ಸಲ್ಲಿಸಿ, ವಿಖ್ಯಾತ್ ಸಂವಿಧಾನದ ಪೀಠಿಕೆಯನ್ನು ವಾಚಿಸಿ ,ಅದ್ವಿಕ್ ಬಂಜನ್ ಹಾಗೂ ಎ ಎನ್ ಜೋಶ್ನ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಎಲ್ಲರೂ ಸಹ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.