Connect with us

ಇತರ

ಎವಿಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Published

on

ಪುತ್ತೂರು- ಬನ್ನೂರಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 5/ 9 /2025 ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಪ್ರೇಮಲತಾ ರೈ ರವರನ್ನು ಸನ್ಮಾನಿಸಿ ಗೌರವಿಸಿ ,ಗುರುವಂದನೆ ಮಾಡಲಾಯಿತು. ಸಂಸ್ಥೆಯ ಸಂಚಾಲಕರಾದ ಎ ವಿ ನಾರಾಯಣ ದಂಪತಿಗಳು ತಮ್ಮ ಗುರುಗಳಾದ ಶ್ರೀಮತಿ ಪ್ರೇಮಲತಾ ರವರನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಸನ್ಮಾನ ಸ್ವೀಕರಿಸಿದ ಸನ್ಮಾನಿತರು ಮಾತನಾಡಿ ಭಾರತದ ಎರಡನೇ ರಾಷ್ಟ್ರಪತಿ ಡಾ .ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜೀವನ ಮೌಲ್ಯಗಳು ನಮಗೆ ಆದರ್ಶ ಜೀವನದ ಗುರಿಗಳನ್ನು ತಲುಪಲು ಶಿಕ್ಷಣವು ಎಲ್ಲರಿಗೆ ಅಗತ್ಯ. ಸಮಾಜದಲ್ಲಿ ಗುರುವಿಗಿಂತ ಉನ್ನತ ಸ್ಥಾನ ಬೇರೊಂದಿಲ್ಲ ಎಂದು ಹೇಳುತ್ತಾ ಗುರುವಂದನೆ ಸಲ್ಲಿಸಿದ ಶ್ರೀ ಎ ವಿ ನಾರಾಯಣ ಹಾಗೂ ಕುಟುಂಬಕ್ಕೂ ಮತ್ತು ಶಾಲೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮಹಾಲಿಂಗೇಶ್ವರ ಐಟಿಐ ನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಭವಾನಿ ಶಂಕರ ಪರಂಗಾಜೆ ಮಾತನಾಡಿ ಡಾ. ರಾಧಾಕೃಷ್ಣನ್ ರವರು ಒಬ್ಬ ಶಿಕ್ಷಣ ತಜ್ಞ, ಒಬ್ಬ ತತ್ವಜ್ಞಾನಿ ,ಒಬ್ಬ ರಾಜಕೀಯ ಮುತ್ಸದ್ದಿ ಹೀಗೆ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುವ ವ್ಯಕ್ತಿತ್ವ ಅವರ ಜೀವನದ ನಡೆ ನಮಗೆ ಆದರ್ಶ. ವ್ಯಕ್ತಿಗಿಂತ ಸಮಾಜ ದೊಡ್ಡದು ಎನ್ನುವ ರೀತಿಯಲ್ಲಿ ತನ್ನ ಹುಟ್ಟು ಹಬ್ಬವನ್ನು ಶಿಕ್ಷಕ ಸಮಾಜದ ಹುಟ್ಟುಹಬ್ಬವನ್ನಾಗಿ ಕರೆ ನೀಡಿದವರು ಎಂದು ಹೇಳುತ್ತಾ ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದು, ತನಗೆ ಕಲಿಸಿದ ಶಿಕ್ಷಕರನ್ನು ನೆನೆದುಕೊಂಡು ತನ್ನ ಬೆಳವಣಿಗೆಯಲ್ಲಿ ಗುರುಗಳ ಪಾತ್ರವನ್ನು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಅಮರನಾಥ ಪಟ್ಟೆ ರವರು ಮಾತನಾಡಿ ದಿನದ ಮಹತ್ವದ ಸಂದೇಶವನ್ನು ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಸೌಮ್ಯ ಶ್ರೀ ಹೆಗಡೆ ವಿದ್ಯಾರ್ಥಿ ಅನುಪ್ ರಾಜ್ ಸಾಂದರ್ಭಿಕವಾಗಿ ಮಾತನಾಡಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರಿಗೆ ಶಾಲು ಹಾಗೂ ಗುಲಾಬಿಯನ್ನು ನೀಡಿ ಅಭಿನಂದಿಸಲಾಯಿತು. ಶಿಕ್ಷಕರಿಗೆ ವಿವಿಧ ಮನೋಲ್ಲಾಸ ಆಟಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಆಡಳಿತಮಂಡಳಿಯ ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ ಪ್ರಧಾನ ಕಾರ್ಯದರ್ಶಿ ಶಾಲೆಯ ಆಡಳಿತ ಅಧಿಕಾರಿ ಶ್ರೀ ಗುಡ್ಡಪ್ಪ ಗೌಡ ಬಲ್ಯ ,ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಳುವೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಗಂಗಾಧರ ಗೌಡ ,ಸೀತಾರಾಮ ಕೇವಳ, ಶ್ರೀಮತಿ ಪ್ರತಿಭಾ ದೇವಿ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ,ಬೋಧಕ- ಬೋಧಕೇತರ ವೃಂದ, ವಿದ್ಯಾರ್ಥಿ -ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಶಿವಾನಿ ,ಆನ್ವಿ ಸುವೀಕ್ಷ ಪ್ರಾರ್ಥಿಸಿ,ಅದ್ವಿತಿ ಬಂಜನ್ ಸ್ವಾಗತಿಸಿ ,ಗನ್ವಿತ್ ಧನ್ಯವಾದ ಸಲ್ಲಿಸಿ, ವಿಖ್ಯಾತ್ ಸಂವಿಧಾನದ ಪೀಠಿಕೆಯನ್ನು ವಾಚಿಸಿ ,ಅದ್ವಿಕ್ ಬಂಜನ್ ಹಾಗೂ ಎ ಎನ್ ಜೋಶ್ನ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಎಲ್ಲರೂ ಸಹ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement