Connect with us

ಇತರ

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ವಿಕ್ರಂ ಹೆಗಡೆ ವಿರುದ್ಧ ಅರಕ್ಷಕ ಠಾಣಾಧಿಕಾರಿ. ಉಪ್ಪಿನಂಗಡಿ ಗೆ ದೂರು

Published

on

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಉಪ್ಪಿನಂಗಡಿ ವತಿಯಿಂದ ಸಾಮಾಜಿಕ ಜಾಣತಾಣ ದುರುಪಯೋಗಪಡಿಸಿಕೊಂಡು ಪುತ್ತೂರು ಶಾಸಕರನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಪ್ರಚಾರ ಮಾಡಿದ ಬಗ್ಗೆ. ಮಹೇಶ್ ವಿಕ್ರಂ ಹೆಗೆಡೆ ಎಂಬ ವ್ಯಕ್ತಿ ಸಾಮಾಜಿಕ ಜಾಣತಾಣದಲ್ಲಿ – ಬಂಟ್ವಾಳದಲ್ಲಿ ನಡೆದ ಹೇಯ ಕೃತ್ಯವು ಪುತ್ತೂರಿನ ಶಾಸಕರ ಕುಮ್ಮಕ್ಕಿನಿಂದ ನಡೆಯುತ್ತಿದೆ ಅನ್ನುವ ಅರ್ಥ ಬರುವಂತೆ ಬರಹಗಳನ್ನು ಬರೆದು ಅವರ ಭಾವಚಿತ್ರವನ್ನು ಕೂಡ ದುರಪಯೋಗ ಪಡಿಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಪಡೆಯುತ್ತಾರೆ. ಅಲ್ಲದೆ ರಾಜ್ಯ ಸರ್ಕಾರ }ಹಾಗೂ ಗೃಹ ಸಚಿವರ ಬಗ್ಗೆ ಕೂಡ ತಪ್ಪು ಗ್ರಹಿಕೆ ಮಾಡುವ ರೀತಿಯಲ್ಲಿ ಪ್ರಕಟಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಶಾಸಕರು, ಸರ್ಕಾರ ಹಾಗೂ ಗೃಹ ಸಚಿವರ ಬಗ್ಗೆ ತಪ್ಪು ಕಲ್ಪನೆ ಮೂಡುವಂತೆ ಪ್ರಕಟಿಸಲಾಗಿದೆ.
ಸಾಮಾಜಿಕ ಜಾಲತಾಣ ವನ್ನು ದುರುಪಯೋಗಪಡಿಸಿಕೊಂಡು ಶಾಸಕರ ಸರ್ಕಾರದ ಹಾಗೂ ಗೃಹ ಮಂತ್ರಿಗಳ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಿರುವ ಮಹೇಶ್ ವಿಕ್ರಂ ಹೆಗ್ಡೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ವಿನಂತಿ ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೌಸೀಫ್ ಯು ಟಿ, ಪುತ್ತೂರು ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ರಾಜರಾಮ್, ನಜೀರ್ ಮಠ, ಆದಂ ಕೊಪ್ಪಲ,ರವಿ ಪಟ್ಟರ್ತಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರ್, ಲತೀಫ್ ಕೂಡ್ಲೂರ್ ,ಜಮಾಲ್ ಕೆಂಪಿ, ಆಸ್ಕರ್ ಆಲಿ ನೆಕ್ಕಿಲಾಡಿ , ಆನಿ ಮಿನೆಜಸ್ ನೆಕ್ಕಿಲಾಡಿ , ಜಯಪ್ರಕಾಶ್ ಬಜತ್ತೂರು , ನಾಸಿರ್ ಮಠ ಮೊದಲದವರು ಉಪಸ್ಥಿತರಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement