Connect with us

ಇತರ

ಹೆಂಡತಿ ಬೆನ್ನಿಗೆ ಚೂರಿ ಹಾಕಿದಳು, ಕಾನೂನು ಮಗಳನ್ನು ಕಸಿದುಕೊಂಡಿತು: ಕೊನೆಗೂ ಮನನೊಂದು ಬಸ್ ಕಂಡಕ್ಟರ್ ಆ*ತ್ಮಹ*ತ್ಯೆ!

Published

on

ಪುರುಷರ ನೋವು, ಅವರ ನಿರಂತರ ಹೋರಾಟಗಳು ಮತ್ತು ಅವರು ಅನುಭವಿಸುವ ತೀವ್ರ ಮಾನಸಿಕ ಹಿಂಸೆಯನ್ನು ಈ ಸಮಾಜ ಹಲವು ಬಾರಿ ಗುರುತಿಸುವುದೇ ಇಲ್ಲ ಎಂಬುದಕ್ಕೆ 38 ವರ್ಷದ ಬಸ್ ಕಂಡಕ್ಟರ್ ರಂಜಿಶ್ ಅವರ ಈ ದುರಂತ ಕಥೆಯೇ ಸಾಕ್ಷಿ. ಪ್ರೀತಿಸಿದ ಹೆಂಡತಿ ಕೈಕೊಟ್ಟು, ಪ್ರಾಣದಂತಿದ್ದ ಮಗಳನ್ನು ಕಾನೂನು ಕಿತ್ತುಕೊಂಡಾಗ ಬದುಕುವ ಆಸೆಯನ್ನೇ ಕಳೆದುಕೊಂಡ ವ್ಯಕ್ತಿಯೊಬ್ಬರ ಕಣ್ಣೀರಿನ ಕಥೆ ಇದು.
ಪ್ರೀತಿಯ ಸಂಸಾರಕ್ಕೆ ಗಲ್ಫ್ ತಂದ ಬಿರುಗಾಳಿ: ರಂಜಿಶ್ ಒಬ್ಬ ಸಾಧಾರಣ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ ಇವರ ಸಂಸಾರ ತೀರಾ ಸುಖಮಯವಾಗಿತ್ತು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಒಂದು ಹೆಣ್ಣು ಮಗು ಕೂಡ ಜನಿಸಿತು. ಆದರೆ, ಮಗು ಹುಟ್ಟಿ ಎರಡು ವರ್ಷಗಳ ನಂತರ ಹೆಂಡತಿ ಕೆಲಸಕ್ಕಾಗಿ ಗಲ್ಫ್ ದೇಶಕ್ಕೆ ತೆರಳಿದಳು. ಅಲ್ಲಿಂದಲೇ ರಂಜಿಶ್ ಅವರ ಕೆಟ್ಟ ದಿನಗಳು ಆರಂಭವಾದವು. ಗಲ್ಫ್‌ಗೆ ಹೋದ ಹೆಂಡತಿ, ಅಲ್ಲಿ ಮತ್ತೊಬ್ಬನ ಪ್ರೇಮಪಾಶಕ್ಕೆ ಬಿದ್ದು ಆತನೊಂದಿಗೇ ಹೊಸ ಜೀವನ ಆರಂಭಿಸಿದಳು. ತನಗೆ ನಂಬಿಕೆ ದ್ರೋಹ ಬಗೆದ ಹೆಂಡತಿ ದೂರವಾದರೂ, ರಂಜಿಶ್ ಧೃತಿಗೆಡಲಿಲ್ಲ. ತನಗೆ ಉಳಿದ ಏಕೈಕ ಆಸರೆಯಾದ ಪುಟ್ಟ ಮಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದರು. 8 ವರ್ಷಗಳ ಏಕಾಂಗಿ ಹೋರಾಟ: ಹೆಂಡತಿ ಇಲ್ಲದ ಕೊರತೆ ಮಗಳಿಗೆ ತಿಳಿಯದಂತೆ ಬರೋಬ್ಬರಿ 8 ವರ್ಷಗಳ ಕಾಲ ರಂಜಿಶ್ ಒಬ್ಬಂಟಿಯಾಗಿಯೇ ಮಗಳನ್ನು ಸಾಕಿ ಬೆಳೆಸಿದರು. ತನ್ನ ಇಡೀ ಜೀವ, ಶಕ್ತಿ ಮತ್ತು ಪ್ರೀತಿಯನ್ನು ಮಗಳಿಗಾಗಿಯೇ ಮುಡಿಪಾಗಿಟ್ಟರು. ಮಗಳೇ ಅವರ ಪ್ರಪಂಚವಾಗಿತ್ತು. ಆದರೆ, ಇಷ್ಟರಲ್ಲೇ ಅವರ ಬದುಕಿನಲ್ಲಿ ಮತ್ತೊಮ್ಮೆ ಆಕೆ ವಿಲ್ಲನ್ ರೂಪದಲ್ಲಿ ಎಂಟ್ರಿ ಕೊಟ್ಟಳು. ಗಲ್ಫ್‌ನಲ್ಲಿದ್ದ ಆ ಮಹಿಳೆ, ಮಗಳು ತನಗೆ ಬೇಕು ಎಂದು ಹೇಳಿ ಕೋರ್ಟ್ ಮೆಟ್ಟಿಲೇರಿದಳು. ತನ್ನ ಕೈಯಾರೆ ಬೆಳೆಸಿದ ಮಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ರಂಜಿಶ್ ಕೊನೆಯವರೆಗೂ ಕಾನೂನು ಹೋರಾಟ ನಡೆಸಿದರು. ಮಗಳನ್ನು ಕಿತ್ತುಕೊಂಡ ಕಾನೂನು – ಒಡೆದುಹೋದ ತಂದೆಯ ಹೃದಯ: ಆದರೆ, ನಮ್ಮ ಕಾನೂನು ವ್ಯವಸ್ಥೆ ತಾಯಿಯ ಪರವಾಗಿ ನಿಂತಿತು. ನ್ಯಾಯಾಲಯವು ಮಗಳನ್ನು ಆಕೆಯ ಹೆತ್ತ ತಾಯಿ ಮತ್ತು ಆಕೆಯ ಹೊಸ ಪತಿಯೊಂದಿಗೆ ಕಳುಹಿಸಲು ಆದೇಶಿಸಿತು. ಮೊದಲು ಹೆಂಡತಿಯನ್ನು ಕಳೆದುಕೊಂಡಿದ್ದ ರಂಜಿಶ್, ಈಗ ತಾನು ಪ್ರಾಣದಂತೆ ಬೆಳೆಸಿದ್ದ ಮಗಳನ್ನೂ ಕಾನೂನಿನ ಕಾರಣದಿಂದಾಗಿ ಕಳೆದುಕೊಂಡರು. ಒಬ್ಬ ಸಾಮಾನ್ಯ ಮನುಷ್ಯನ ಇಡೀ ಬದುಕಿನ ಸಂತೋಷ ನಾಶವಾಗಲು ಈ ಆಘಾತವೊಂದೇ ಸಾಕಾಗಿತ್ತು. ಮಗಳು ದೂರಾದ ನಂತರ ರಂಜಿಶ್ ಅವರ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು. ಮಗಳಿಲ್ಲದ ಶೂನ್ಯತೆಯನ್ನು ತಡೆದುಕೊಳ್ಳಲಾಗದೆ, ತೀವ್ರ ಖಿನ್ನತೆಗೆ ಒಳಗಾದ ರಂಜಿಶ್ ಕೊನೆಗೂ ಆ*ತ್ಮಹ*ತ್ಯೆ ಮಾಡಿಕೊಂಡರು. ಸಮಾಜದ ಕಣ್ಣಿಗೆ ಕಾಣದ ಪುರುಷರ ನೋವು: ಈ ಅತ್ಯಂತ ಆಘಾತಕಾರಿ ಘಟನೆ ಸಮಾಜಕ್ಕೆ ಒಂದು ಕಹಿ ಸತ್ಯವನ್ನು ನೆನಪಿಸುತ್ತಿದೆ. ನಮ್ಮ ಸಮಾಜದಲ್ಲಿ ಪುರುಷರು ಅನುಭವಿಸುವ ಮಾನಸಿಕ ಸಂಕಟಗಳು, ನೋವುಗಳು ಮತ್ತು ಅವರ ಮೌನ ಹೋರಾಟಗಳು ಯಾರಿಗೂ ಕಾಣಿಸುವುದೇ ಇಲ್ಲ. ಕಣ್ಣೀರು ಹಾಕಲಾಗದೆ, ನೋವನ್ನು ಹಂಚಿಕೊಳ್ಳಲಾಗದೆ ವ್ಯವಸ್ಥೆಯ ಆಟಕ್ಕೆ ಬಲಿಯಾದ ರಂಜಿಶ್

 
 

Continue Reading
Click to comment

Leave a Reply

Your email address will not be published. Required fields are marked *

Advertisement