Published
9 hours agoon
By
Akkare News
ಈ ಕುರಿತು ವೇದಿಕೆಯ ಪ್ರ.ಸಂಚಾಲಕ ಅಮಳ ರಾಮಚಂದ್ರ ಅವರ ನೇತೃತ್ವದಲ್ಲಿ ನಿಯೋಗವು ಮಾನ್ಯ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮನವಿಯಲ್ಲಿ ವೇದಿಕೆಯು ತಿಳಿಸಿರುವಂತೆ, ಈ ಘಟನೆ ಸಂಬಂಧ ಎರಡೂ ಕಡೆಯವರ ಮೇಲೂ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಕೆಲವು ಕೋಮುವಾದಿ ಸಂಘಟನೆಗಳು ಪ್ರಕರಣವನ್ನು ತಿರುಚಿ ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿವೆ. ಇದರಿಂದ ಸಮಾಜದ ವಿವಿಧ ಸಮುದಾಯಗಳ ನಡುವೆ ಅಪನಂಬಿಕೆ, ಭಯ ಮತ್ತು ಉದ್ರಿಕ್ತ ವಾತಾವರಣ ಉಂಟಾಗುವ ಸಾಧ್ಯತೆ ಇದೆ.ತಾಲೂಕಿನ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರ. ಸಂಚಾಲಕ ಅಮಳ ರಾಮಚಂದ್ರ, ಸಹ ಸಂಚಾಲಕ ಮೌರಿಸ್ ಮಸ್ಕರೇನ್ಹಸ್, ಉಲ್ಲಾಸ್ ಕೋಟ್ಯಾನ್, ಮಹಮ್ಮದ್ ರಿಯಾಝ್, ಸಮಿತಿ ಸದಸ್ಯರಾದ ಝುಬೈರ್ ಪಿ.ಕೆ., ಸಲೀಂ ಮಾಯಂಗಳ, ಬಷೀರ್ ಮುಕ್ವೆ, ಜಮಾಲ್ ಎಂ.ಜಿ.ರೋಡ್, ಮುಬೀನ್ ಇಂದಿರಾ ನಗರ, ಶರೀಫ್ ಇಂದಿರಾನಗರ, ಚಂದ್ರಶೇಖರ ಕುರಿಂಜಪುತ್ತೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮಾನವ ಬಂಧುತ್ವ ವೇದಿಕೆ ಸಹಾಯಕ ಆಯುಕ್ತರಲ್ಲಿ ವಿನಂತಿಸಿದೆ.







