Published
2 months agoon
By
Akkare News
ರಾಯಚೂರು: ಜಮೀನಿನ ಖಾತಾ ಉತಾರ ನೀಡಲು ವ್ಯಕ್ತಿಯೊಬ್ಬರಿಂದ 1.5 ಲಕ್ಷ ಲಂಚ ಪಡೆದಿದ್ದ ಬಿಜನಗೇರಾ ಗ್ರಾಮದ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೇಔಟ್ ನಿರ್ಮಾಣಕ್ಕಾಗಿ ಎರಡು ಎಕರೆ ಜಮೀನಿನ ಖಾತಾ ಉತಾರಕ್ಕಾಗಿ ಬಿಜನಗೇರಾದ ಮೆಹಬೂಬ್ ಅಲಿ ಎಂಬುವರು ಮನವಿ ಮಾಡಿದ್ದರು. ಉತಾರ ಕೊಡಲು ಪಿಡಿಒ ಅವರು 2 ಲಕ್ಷ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮೆಹಬೂಬ್ ಅಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು. 


ಇಂದು ಲಕ್ಷ್ಮೀ ಪ್ಯಾಟಿ ತನ್ನ ಪತಿ ಖಾತೆಗೆ ಫೋನ್ ಪೇ ಮೂಲಕ 1.50 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಕ್ಷ್ಮೀಯನ್ನು ವಶಕ್ಕೆ ತೆಗೆದುಕೊಂಡರು.




