ಹಾವೇರಿ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ. ಗೀತಾ ಗುಡ್ಡೆಮನೆ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ . ಈ ನೇಮಕಾತಿಯು ಮೂರು ವರ್ಷಗಳ ಅವಧಿಯನ್ನು ಹೊಂದಿದೆ ಡಾ. ಗೀತಾ ಗುಡ್ಡೆಮನೆ ಅವರು ಕ್ರೀಡೆ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿಯಾಗಿ, ಪ್ರಸ್ತುತ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ, ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ವೇದಿಕೆ ಉಪಾದ್ಯಕ್ಷರಾಗಿ ಅಲ್ಲದೆ ಕರ್ನಾಟಕ ದೈಹಿಕ ಶಿಕ್ಷಣ ಕ್ರೀಡಾ ಸಂಘ ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಈ ಹಿಂದೆ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದ್ಯಸರಾಗಿ ಕಾರ್ಯನಿರ್ವಹಿದ್ದರು.