Connect with us

ಶಾಲಾ ಚಟುವಟಿಕೆ

ಜಿಲ್ಲಾ ಮಟ್ಟದ ಟೇಕ್ವಾಂಡೋ ಸ್ಪರ್ಧೆ : ಕೊಂಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳ ರಾಜ್ಯಮಟ್ಟಕ್ಕೆ ಆಯ್ಕೆ

Published

on

ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ಪ್ರಸಕ್ತ ಸಾಲಿನ 14 ರ ವಯೋಮಾನದ ಮಕ್ಕಳ ಟೇಕ್ವಾಂಡೋ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪಿ.ಎಂ.ಶ್ರೀ. ಕರ್ನಾಟಕ ಪಬ್ಲಿಕ್ ಸ್ಕೂಲ್ ವಿಟ್ಲ ಇಲ್ಲಿ ದಿನಾಂಕ 08-09-2026 ರಂದು ನಡೆದ ಜಿಲ್ಲಾ ಮಟ್ಟದ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಕೊಂಬೆಟ್ಟು ಪ್ರೌಢಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಾದ ತೃಷ್ಯಾ ಮತ್ತು ಲಿಪಿಕ ಪ್ರಥಮ ಸ್ಥಾನವನ್ನು ಪಡೆದು ಈ ಸಾಧನೆ ಮಾಡಿರುತ್ತಾರೆ.
 
ತೃಷ್ಯಾ ಇವರು ಓಜಾಲ ನಿವಾಸಿ ಶ್ರೀ ಕೃಷ್ಣಪ್ಪ ಹಾಗೂ ಶ್ರೀಮತಿ ಮಮತಾ ರವರ ಪುತ್ರಿಯಾಗಿದ್ದು, ಲಿಪಿಕರವರು ಓಜಾಲ ನಿವಾಸಿ ಎಸ್ . ಎಸ್. ಸಂಜೀವಮತ್ತು ಶ್ರೀಮತಿ ಸುನಂದರವರ ಪುತ್ರಿಯಾಗಿದ್ದಾರೆ. ಸದ್ರಿ ವಿದ್ಯಾರ್ಥಿಗಳು ಅಕ್ಟೋಬರ್‌ ತಿಂಗಳಲ್ಲಿ ಯಾದಗಿರಿಯಲ್ಲಿ ಜರುಗಲಿರುವ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ ಎಂದು ಶಾಲಾ ಉಪಪ್ರಾಂಶುಪಾಲರಾದ ನಾಗರಾಜ್ ಭಟ್ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಂಜಲಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version