Published
4 months agoon
By
Akkare Newsತಮ್ಮ ತಮ್ಮ ಕೆಲಸಗಳಲ್ಲಿ ಬಿಡುವಿಲ್ಲದೆ ಕಾರ್ಯಪ್ರವೃತರರಾಗಿರುವ ಈ ಜಗದಲ್ಲಿ ಇಲ್ಲೊಂದು ಏಕ ಮನಸ್ಥಿತಿಯ ಹಲವು ತಂಡಗಳು ಸೇರಿ ಜ್ಞಾನ ದೇಗುಲದ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ಶ್ರಮಿಸಿವೆ.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿನ ಸುಂದರ ಶಾಲೆಯ ಪರಿಸರದ ಸ್ವಚ್ಛತೆಯ ಕಾರ್ಯದ ಬಗ್ಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಝೀಝ್ ಬಿ.ಕೆ ಮತ್ತು ಸದಸ್ಯರ ಅಪೇಕ್ಷೆಗೆ ಅವರ ಜೊತೆಯಾಗಿ ಸಹಕಾರ ನೀಡಲು ಮುಂದಾದ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೊಯಿಲ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಸೇಲಿಕತ್, ವಲಕಡಮ ಒಕ್ಕೂಟ ಅಧ್ಯಕ್ಷ ಸುದೀಶ್, ಸೇವಾಪ್ರತಿನಿಧಿಗಳಾದ ಕವಿತಾ ಮತ್ತು ಗೀತಾ ಮತ್ತು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಒಕ್ಕೂಟ ಕೆಮ್ಮಾರದ ಅಧ್ಯಕ್ಷ ಶ್ರೀ ರವಿಕಾಂತ ಬಡ್ಡಮೆ ಮತ್ತು ಸದಸ್ಯ ಶಿವಾನಂದ ಹಾಗೂ ನಾವು ನಿಮ್ಮ ಜೊತೆ ಸೇರುವೆವು ಎಂದು ಭರವಸೆ ನೀಡಿ ಜೊತೆಯಾದವರು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು. ಇವರೆಲ್ಲರ ನಿಸ್ವಾರ್ಥ ಸೇವೆ ಶ್ಲಾಘನೀಯವಾದುದು.
ಇವರಿಗೆ ಶಾಲೆಯ ಪರವಾಗಿ ಹೃದಯ ಸ್ಪರ್ಶಿ ನಮನಗಳನ್ನು ಸಲ್ಲಿಸುತ್ತಿದ್ದೇವೆ. ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಂಡ ಸರ್ವರಿಗೂ ಬೆಳಗಿನ ಉಪಹಾರವನ್ನು ನೀಡಿ ಹಸಿವು ತಣಿಸಿದ ಕೊಡುಗೈ ದಾನಿಗಳಾದ ಶ್ರೀಯುತ ಪದ್ಮನಾಭ ಶೆಟ್ಟಿ ಕೆಮ್ಮಾರ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳಾಗಿರುವ ವಾಮನ ಬರಮೇಲು, ಎಸ್. ವೈ. ಎಸ್ ಕೆಮ್ಮಾರ ಇದರ ಅಧ್ಯಕ್ಷರಾದ ಶರೀಫ್ ಕೆಮ್ಮಾರ, ಹಿರಿಯ ವಿದ್ಯಾರ್ಥಿಗಳಾದ ರಾಮಣ್ಣ ಬಡ್ಡಮೆ, ಶಂಸುದ್ದಿನ್ ಅಳಕೆ, ನಝೀರ್ ಕೆಮ್ಮಾರ, ಮುಸ್ತಫಾ ಬರಮೇಲು, ಶೌಕತ್ ಜೇಡರಪೇಟೆ, ಸಫ್ವಾನ್ ಆಕಿರೆ, ಪ್ರಕಾಶ್ ಕೆ. ಆರ್, ಜುನೈದ್ ಕೆಮ್ಮಾರ, ರಹಿಮಾನ್ ಖಾನ್ ಮುಂತಾದವರು ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಂಡರು.
ಇವರೆಲ್ಲರಿಗೂ ಶಾಲಾಭಿವೃದ್ದಿ ಸಮಿತಿ ಮತ್ತು ಅಧ್ಯಾಪಕ ವೃಂದ, ಪೋಷಕವೃಂದದ ಪರವಾಗಿ ಮನದಾಳದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಸಹಕರಿಸಿದ ಅಕ್ಷದಾಸೋಹ ಸಿಬ್ಬಂದಿಗಳಿಗೂ ಧನ್ಯವಾದಗಳು.
ಮುಖ್ಯಗುರುಗಳು/ಅಧ್ಯಾಪಕ ವೃಂದ /ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಕೆಮ್ಮಾರ