Connect with us

ಶಾಲಾ ಚಟುವಟಿಕೆ

ಎ ವಿ ಜಿ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾಸಭೆ :ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಣದ ಉದ್ದೇಶ :.ಚಂದ್ರಶೇಖರ್ ಕೆದ್ದೋಟೆ

Published

on

ಬನ್ನೂರು. ನೈತಿಕತೆ ಎನ್ನುವಂತದ್ದು ಒತ್ತಾಯಪೂರ್ವಕವಾಗಿ ಬರುವಂತದ್ದಲ್ಲ .ಮಕ್ಕಳು ಭಯಮುಕ್ತರಾಗಿ ಖುಷಿ ಖುಷಿಯಿಂದ ಕಲಿಯುವಂತಾಗಬೇಕು ಎಂದು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಚಂದ್ರಶೇಖರ ಕೆದ್ದೋಟೆ ಹೇಳಿದರು. ಅವರು ಇಲ್ಲಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯ 2025 -26ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಕಾಲಕಾಲಕ್ಕೆ ಮಾರ್ಗದರ್ಶನವನ್ನು ನೀಡುತ್ತಾ ಒಳ್ಳೆಯ ಸಂಸ್ಕಾರಗಳನ್ನು ಕಲಿಯುವುದರ ಜೊತೆಗೆ ಕೆಟ್ಟ ಚಟಗಳತ್ತ ಮುಖ ಮಾಡದಂತೆ ನೋಡಿಕೊಳ್ಳುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿ ಎಂದು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣಗೌಡ ಕಳುವಾಜೆರವರು ಮಾತನಾಡಿ ಮಕ್ಕಳನ್ನು ಬೆಳೆಸುವ ಭರಾಟೆಯಲ್ಲಿ ಮಕ್ಕಳ ಬೇಡಿಕೆಗಳನ್ನು ತಕ್ಷಣ ಈಡೇರಿಸುವುದಕ್ಕಿಂತಲೂ ಅದರ ಒಳಿತು ಕೆಡುಕುಗಳನ್ನು ಸೂಕ್ಷ್ಮವಾಗಿ ಹೇಳಿಕೊಡುತ್ತಾ ದಿನನಿತ್ಯದ ಕೆಲಸ ಚಟುವಟಿಕೆಗಳಲ್ಲಿ ಅವರನ್ನು ನಮ್ಮ ಜೊತೆ ಸೇರಿಸಿಕೊಂಡಾಗ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಲು ಸಾಧ್ಯ ಎಂದರು.
ಶಾಲಾ ಸಂಚಾಲಕರಾದ ಎ ವಿ ನಾರಾಯಣ್ ರವರು ಮಾತನಾಡಿ ಶಾಲೆಯನ್ನು ಸ್ಥಾಪಿಸಿದ ಉದ್ದೇಶವನ್ನು ತಿಳಿಯಪಡಿಸಿ ಇನ್ನೂ ಉತ್ತಮ ರೀತಿಯಲ್ಲಿ ಶಾಲೆಯನ್ನು ನಡೆಸುವಲ್ಲಿ ಪೋಷಕರ ಸಲಹೆ ಸಹಕಾರವನ್ನು ಕೋರಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಮರನಾಥ ಬಿ ಪಿ ರವರು ಶಾಲೆಯಲ್ಲಿ ನಡೆಸುವ ಚಟುವಟಿಕೆಗಳನ್ನು ಮತ್ತು ಶಾಲಾ ನಿಯಮಗಳನ್ನು ತಿಳಿಸಿದರು. ಶಾಲಾ ಆಡಳಿತಾಧಿಕಾರಿಯಾದ ಗುಡ್ಡಪ್ಪ ಗೌಡ ಬಲ್ಯರವರು ಅತಿಥಿಗಳ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷಕ್ಕೆ ನೂತನ ಶಿಕ್ಷಕ ರಕ್ಷಕ ಸಂಘವನ್ನು ರಚಿಸಲಾಯಿತು, ಶ್ರೀಮತಿ ಸೌಮ್ಯಶ್ರೀ ಹೆಗಡೆಯವರು ಸಂಘದ ನೂತನ ಅಧ್ಯಕ್ಷರಾಗಿ ಪುನರ್ ಆಯ್ಕೆಗೊಂಡು ಎಲ್ಲರ ಸಹಕಾರವನ್ನು ಕೋರಿದರು.

ವಿದ್ಯಾರ್ಥಿಯಾದ ಶ್ರೀಶ ಆಚಾರ್ಯ ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು.
ವಿದ್ಯಾರ್ಥಿನಿಯರಾದ ಚಾರ್ವಿ ,ಅದ್ವಿತಿ ,ಶಿವಾನಿ ಪ್ರಾರ್ಥನೆಗೈದರು.
ಶಿಕ್ಷಕಿಯರಾದ ಸವಿತಾ ಕೆ ರವರು ಸ್ವಾಗತಿಸಿ ಸುಚಿತ ರವರು ವಂದಿಸಿದರು.
ಸಹ ಶಿಕ್ಷಕಿಯಾದ ಪ್ರಕ್ಷುತರವರು ಕಾರ್ಯಕ್ರಮ ನಿರೂಪಿಸಿದರು. ಉಳಿದ ಶಿಕ್ಷಕರು ಸಹಕರಿಸಿದರು

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version