Published
2 months agoon
By
Akkare Newsಬಳ್ಳಾರಿ: ಕೊಲೆ ಆರೋಪದಡಿಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಭೇಟಿಗೆ ಬಂದ ಪತ್ನಿ, ಸಹೋದರ ಹಾಗೂ ಸಂಬಂಧಿಗಳ ಮುಂದೆ ಬೆನ್ನು ನೋವಿನ ಸಮಸ್ಯೆ ಹೇಳಿಕೊಂಡು ಬೇಸರ ಹೊರಹಾಕಿದರು.
ದರ್ಶನ್ ಪರಿಸ್ಥಿತಿ ಕಂಡು ಬೇಸರಗೊಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದಾರೆ.
ಆದಷ್ಟು ಬೇಗ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ದರ್ಶನ್ ಗೆ ವಿಜಯಲಕ್ಷ್ಮಿ ಮನವಿ ಮಾಡಿದರೂ ಪತ್ನಿ ಮಾತಿಗೆ ದರ್ಶನ್ ಸ್ಪಂದಿಸಲಿಲ್ಲ. ಬಳ್ಳಾರಿಯಲ್ಲಿ ಬೇಡ, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯೋಣ ಎಂದಿದ್ದಾರೆ.
ಕೂಡಲೇ ಇದರ ಬಗ್ಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಿ. ವಕೀಲರ ಜೊತೆ ಚರ್ಚಿಸುವಂತೆ ದರ್ಶನ್ ಹೇಳಿದ್ದಾರೆ. ಆರೋಗ್ಯದ ಕಡೆ ಗಮನ ಕೊಡುವಂತೆ ಸಹೋದರ ಸಲಹೆ ನೀಡಿದರು.