ಅಭಿವೃದ್ಧಿ ಕಾರ್ಯಗಳು ಆರೋಗ್ಯ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಇಂದು ಚೇತನಾ ಆಸ್ಪತ್ರೆಯಲ್ಲಿ ಉಚಿತ ಫೈಬ್ರೋ ಸ್ಕ್ಯಾನ್ ಲಿವರ್ ಫಂಕ್ಷನ್ ಟೆಸ್ಟ್ ತಪಾಸಣೆಅಭಿವೃದ್ಧಿ ಕಾರ್ಯಗಳು ಆರೋಗ್ಯ ಇಂದಿನ ಕಾರ್ಯಕ್ರಮ ಇತರ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಜೀವನಶೈಲಿ ತಂತ್ರಜ್ಞಾನ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಫೆ.22 ರಂದು ಕೋಡಿಂಬಾಡಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ *ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಯಶಸ್ವಿ ಕಾರ್ಯಕ್ರಮ 250 ಕ್ಕೂ ಮಿಕ್ಕಿ ಸ್ವನ ಗಳಿಗೆ ಲಸಿಕೆಅಭಿವೃದ್ಧಿ ಕಾರ್ಯಗಳು ಆರೋಗ್ಯ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಫೆ.22 ರಂದು ಕೋಡಿಂಬಾಡಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮಅಭಿವೃದ್ಧಿ ಕಾರ್ಯಗಳು ಆರೋಗ್ಯ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಆತ್ರೇಯ ಮಲ್ಟಿಸ್ಲೆಷಲಿಟಿ ಕ್ಲಿನಿಕ್ ಪುತ್ತೂರುವತಿಯಿಂದ : ಉಚಿತ ಗುದಾಗತ ರೋಗಗಳ ತಪಾಸಣಾ ಶಿಬಿರ (ಪೈಲ್ಸ್, ಫಿಷರ್, ಫಿಸ್ತುಲ)ಅಭಿನಂದನೆ ಅಭಿವೃದ್ಧಿ ಕಾರ್ಯಗಳು ಆರೋಗ್ಯ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚಿಣ್ಣರ ಲೋಕ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಶಾಲಾ ಚಟುವಟಿಕೆ ಸಭೆ - ಸಮಾರಂಭ ಸ್ಥಳೀಯ
ಪುತ್ತೂರು: ತೆಂಕಿಲದಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕೇಂದ್ರ ಪುತ್ತೂರು ಶಾಸಕ ಅಶೋಕ್ ರೈಯವರಿಂದ ಉದ್ಘಾಟನೆಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಆರೋಗ್ಯ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಗಣರಾಜ್ಯೋತ್ಸವದ ಪ್ರಯುಕ್ತ "ಆತ್ರೇಯ ಮಲ್ಟಿಸ್ಪೆಷಲಿಟಿ ಕ್ಲಿನಿಕ್" ಇವರ ವತಿಯಿಂದ *ಉಚಿತ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಶಿಬಿರ*Published
1 week agoon
By
Akkare Newsಕರ್ನಾಟಕ ರಾಜ್ಯದ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ತುರ್ತು ಸಂದರ್ಭಗಳಲ್ಲಿ ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕ ಸದಸ್ಯ ನ್ಯಾಯ ಪೀಠ ಈ ಆದೇಶ ಹೊರಡಿಸಿದೆ.
“ನಾಗಭೂಷಣ ಬಿ. Vs ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಹೈಕೋರ್ಟ್ ಮತ್ತಿತರರು” ಪ್ರಕರಣದಲ್ಲಿ ದಿನಾಂಕ 24.9.2024ರಂದು ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ಕರ್ನಾಟಕ ಹೈಕೋರ್ಟಿನಲ್ಲಿ ಸಹಾಯಕ ನ್ಯಾಯಾಲಯ ಅಧಿಕಾರಿಯ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ನಾಗಭೂಷಣ ಬಿ. ಎಂಬವರು ಪಲ್ಮನರಿ ಹೈಪರ್ ಟೆನ್ಶನ್ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರು ಮಲ್ಲೇಶ್ವರಂನ ಕೆ. ಸಿ. ಜನರಲ್ ಹಾಸ್ಪಿಟಲ್ ಆವರಣದಲ್ಲಿರುವ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದರು.
ಸದರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವ ಸಲುವಾಗಿ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆ ಮಜುಂದಾರ್ ಮೆಡಿಕಲ್ ಸೆಂಟರ್ ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದರು.
ವೈದ್ಯಕೀಯ ಚಿಕಿತ್ಸಾ ವೆಚ್ಚ ರೂಪಾಯಿ 2,63,764 ನ್ನು ಮರುಪಾವತಿಸುವಂತೆ ಕೋರಿ ಶ್ರೀ ನಾಗಭೂಷಣ ಬಿ. ಅವರು ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯ ಜೊತೆಗೆ ವೈದ್ಯಕೀಯ ಬಿಲ್ಲುಗಳು, ವೈದ್ಯರ ಚಿಕಿತ್ಸಾ ವರದಿ, ಆಸ್ಪತ್ರೆಯಿಂದ ದಿನಾಂಕ 23.12.2022 ರಂದು ಬಿಡುಗಡೆಯಾದ ವರದಿಯನ್ನು ಸಲ್ಲಿಸಿದರು. ಸರಕಾರದಿಂದ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ತುರ್ತು ಸಂದರ್ಭ ಉದ್ಭವಿಸಿದ ಕುರಿತು ಸವಿಸ್ತಾರವಾದ ವಿವರಣೆಯನ್ನು ಪತ್ರದ ಜೊತೆಗೆ ಸಲ್ಲಿಸಿದರು.
ಅರ್ಜಿದಾರರ ಮನವಿಯನ್ನು ಪರಿಶೀಲಿಸಿದ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರು ಸರಕಾರಿ ಆದೇಶ ಸಂಖ್ಯೆ ಸಿಆಸುಇ 31 ಎಸ್ಎಂಆರ್ 2014 ದಿನಾಂಕ 5.11.2014 ರ ಶರ್ತಗಳನ್ನು ಅರ್ಜಿದಾರರು ಪಾಲಿಸಿದ್ದಾರೆ ಎಂಬ ನಿಷ್ಕರ್ಷೆಗೆ ಬಂದು ಪ್ರಸ್ತಾವನೆಯನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, ಮಾಗಡಿ ರಸ್ತೆ ಬೆಂಗಳೂರು ಇಲ್ಲಿಗೆ ಕಳುಹಿಸಿದರು.
ಆದರೆ ಅರ್ಜಿದಾರರ ವೈದ್ಯಕೀಯ ಕ್ಲೇಮ್ ಸರಕಾರದ ಆದೇಶ ಸಂಖ್ಯೆ ಸಿಆಸುಇ 31 ಎಸ್.ಎಂ.ಆರ್ 2024 ದಿನಾಂಕ 5.11.2014 ರಲ್ಲಿ ತಿಳಿಸಿದಂತೆ ತುರ್ತು ಸಂದರ್ಭದ ಪ್ರಕರಣಗಳ ವ್ಯಾಪ್ತಿಗೆ ಒಳಪಟ್ಟಿಲ್ಲವೆಂಬ ಹಿಂಬರಹ ನೀಡಿ ಕ್ಲೇಮನ್ನು ರಿಜಿಸ್ಟ್ರಾರ್ ಜನರಲ್ ಅವರಿಗೆ ಮರಳಿಸಲಾಯಿತು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಿದ ಹಿಂಬರಹದಿಂದ ಬಾಧಿತರಾದ ಶ್ರೀ ನಾಗಭೂಷಣ್ ಬಿ ಅವರು ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಂಖ್ಯೆ 17956/2024 ಅನ್ನು ದಾಖಲಿಸಿ ತನ್ನ ನ್ಯಾಯ ಸಮ್ಮತ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಬಿಲ್ಲನ್ನು ಪರಿಗಣಿಸುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರಾರ್ಥಿಸಿದರು.
ಕರ್ನಾಟಕ ಸರಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ಅನ್ವಯ ರಾಜ್ಯದ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ವೆಚ್ಚವನ್ನು ಸಕ್ಷಮ ಮಂಜೂರಾತಿ ಪ್ರಾಧಿಕಾರಗಳು ಸಿ.ಜಿ.ಹೆಚ್.ಎಸ್. ದರಪಟ್ಟಿ ಅನುಸಾರ ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.
ರಾಜ್ಯ ಸರಕಾರವು ಆದೇಶ ಸಂಖ್ಯೆ ಸಿಆಸುಇ 31 ಎಸ್ಎಂಆರ್ 20 14 ದಿನಾಂಕ 5.11.2014 ರ ಪ್ರಕಾರ ಕೆಲವು ತುರ್ತು ಸಂದರ್ಭಗಳಲ್ಲಿ ಸರಕಾರಿ ನೌಕರರು ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ಪ್ರಕರಣಗಳನ್ನು ಅಪವಾದಾತ್ಮಕ/ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಸಿಜಿಎಚ್ಎಸ್ ದರಗಳನ್ನು ಅಥವಾ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ನಿಗದಿಪಡಿಸುವ ಅರ್ಹತಾ ಮೊತ್ತವನ್ನು ನಿಯಮ ಸಡಿಲಿಸಿ ಮಂಜೂರು ಮಾಡಲು ಇಲಾಖೆಯ ಕಾರ್ಯದರ್ಶಿಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿತ್ತು.
ಸರಕಾರಿ ನೌಕರರು ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚದ ಕ್ಲೇಮುಗಳ ಅರ್ಹತಾದಾಯಕ ಮೊತ್ತದ ಬಗ್ಗೆ ಹಲವಾರು ಇಲಾಖೆಗಳು ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದರು. ಅಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅರ್ಹತಾದಾಯಕ ಮೊತ್ತವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಕಾಲದಲ್ಲಿ ತಿಳಿಸಲು ಸಾಧ್ಯವಾಗದೆ ವೈದ್ಯಕೀಯ ವೆಚ್ಚಗಳನ್ನು ಮರುಪಾವತಿಸಲು ಉಂಟಾಗುತ್ತಿರುವ ವಿಳಂಬವನ್ನು ಗಮನಿಸಿದ ಸರಕಾರವು ಆದೇಶ ಸಂಖ್ಯೆ ಸಿಆಸುಇ 48 ಎಸ್ಎಂಆರ್ 2018 (ಭಾ) ದಿನಾಂಕ 13.9.2019 ರ ಪ್ರಕಾರ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿಯ ಅರ್ಹತಾದಾಯಕ ಮೊತ್ತದ ಬಗ್ಗೆ ಪ್ರಸ್ತಾವನೆಗಳನ್ನು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಟ್ರಸ್ಟ್, ಬೆಂಗಳೂರು ಇವರಿಗೆ ಸಲ್ಲಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಿತು. ಸುವರ್ಣ ಆರೋಗ್ಯ ಟ್ರಸ್ಟ್ ಇಂತಹ ಪ್ರತಿಯೊಂದು ಕ್ಲೇಮುಗಳನ್ನು ಸಿಜಿಎಚ್ಎಸ್ ದರಪಟ್ಟಿಯಂತೆ ಪರಿಶೀಲಿಸಿ ಮರುಪಾವತಿಸಬಹುದಾದ ಅರ್ಹತಾದಾಯಕ ಮೊತ್ತದ ಮಾಹಿತಿಯನ್ನು ಸಕಾಲದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವಂತೆ ದಿನಾಂಕ 13.9.2024 ರ ಸರಕಾರಿ ಆದೇಶದಲ್ಲಿ ಆದೇಶಿಸಿತು.
ಮೇಲ್ಕಾಣಿಸಿದ ಸರಕಾರಿ ಆದೇಶಗಳನ್ನು ಪರಿಶೀಲಿಸಿದ ನ್ಯಾಯಪೀಠವು ದಿನಾಂಕ 5.11.2014ರ ಸರಕಾರಿ ಆದೇಶದ ಕಂಡಿಕೆ 5 ರಲ್ಲಿ ತಿಳಿಸಿದ ಅಂಶವನ್ನು ಉಲ್ಲೇಖಿಸಿತು. ಸರಕಾರಿ ನೌಕರನಿಗೆ ತಜ್ಞ ವೈದ್ಯರ ಚಿಕಿತ್ಸೆಯ ಅವಶ್ಯಕತೆ ಇದ್ದು ಸದರಿ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯ ಇಲ್ಲದೆ ಇದ್ದಲ್ಲಿ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಯಲ್ಲಿ ಸರಕಾರಿ ನೌಕರನು ಚಿಕಿತ್ಸೆ ಪಡೆಯಬಹುದು. ಅಂಥ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸರಕಾರಿ ನೌಕರರು ಅರ್ಹರಾಗಿರುತ್ತಾರೆ.
ಈ ಪ್ರಕರಣದಲ್ಲಿ ಅರ್ಜಿದಾರರು ಮೊದಲು ಸರಕಾರಿ ಆಸ್ಪತ್ರೆಯಾದ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸದರಿ ಆಸ್ಪತ್ರೆಯ ವೈದ್ಯರು ತಜ್ಞ ವೈದ್ಯರ ಚಿಕಿತ್ಸೆಗಾಗಿ ಅರ್ಜಿದಾರರನ್ನು ಮಜುಮ್ದಾರ್ ಮೆಡಿಕಲ್ ಸೆಂಟರ್ ಎಂಬ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ದಿನಾಂಕ 5.11.2014 ರ ಸರಕಾರಿ ಆದೇಶದ ಕಂಡಿಕೆ 5 ರ ಪ್ರಕಾರ ವೈದ್ಯಕೀಯ ವೆಚ್ಚ ಮರುಪಾವತಿಗೆ ಅರ್ಜಿದಾರರು ಅರ್ಹತೆ ಹೊಂದಿರುತ್ತಾರೆ ಎಂಬ ನಿಷ್ಕರ್ಷೆಗೆ ಬಂದ ನ್ಯಾಯಪೀಠವು ರಿಟ್ ಅರ್ಜಿಯನ್ನು ಪುರಸ್ಕರಿಸಿತು.
ದಿನಾಂಕ 23.1.2023 ರಂದು ಮೂರನೇ ಪ್ರತ್ಯೇರ್ಜಿದಾರರಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಿದ ಹಿಂಬರಹವನ್ನು ರದ್ದುಪಡಿಸಿತು.
ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಕ್ಲೇಮನ್ನು ಸಂಪೂರ್ಣ ದಾಖಲಾತಿಗಳೊಂದಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಸಲ್ಲಿಸುವಂತೆ ರಿಟ್ ಅರ್ಜಿದಾರರಿಗೆ ನಿರ್ದೇಶಿಸಿತು.
ಅರ್ಜಿದಾರರು ಎಲ್ಲಾ ಅವಶ್ಯಕ ದಾಖಲೆಗಳೊಂದಿಗೆ ವೈದ್ಯಕೀಯ ಚಿಕಿತ್ಸಾ ಮರುಪಾವತಿ ವೆಚ್ಚದ ಕ್ಲೇಮನ್ನು ಸಲ್ಲಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಿ.ಜಿ.ಹೆಚ್.ಎಸ್. ದರಪಟ್ಟಿ ಪ್ರಕಾರ ವೈದ್ಯಕೀಯ ಕ್ಲೇಮನ್ನು ಪರಿಗಣಿಸಿ ನಿಯಮಾನುಸಾರ ಇತ್ಯರ್ಥ ಪಡಿಸುವಂತೆ ಮೂರನೇ ಪ್ರತ್ಯೇರ್ಜಿದಾರರಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ನಿರ್ದೇಶಿಸಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ