Published
1 day agoon
By
Akkare Newsಧರ್ಮನಗರ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರ ಕ್ಷೇತ್ರದ ಕುರಿತಾದ ಭಕ್ತಿದ ಅರಿಕೆ ಎನ್ನುವ ಭಕ್ತಿಗೀತೆ ನಂದನ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತು. ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರದಲ್ಲಿ ವೈದ್ಯನಾಥ, ಮಲರಾಯ ಸಪರಿವಾರ ದೈವಗಳ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್ಯಕ್ರಮದ ದಾರ್ಮಿಕ ಸಭಾ ವೇದಿಕೆಯಲ್ಲಿ ಸಂಸದ, ಕ್ಯಾಪ್ಟನ್ ಬ್ರಿಜೇಶ್ ಚೌಟ ಭಕ್ತಿಗೀತೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಚರಣ್ ಅಮೈ ಗಾಯನದ ಭಕ್ತಿದ ಅರಿಕೆ ಭಕ್ತಿಗೀತೆಗೆ ನಂದನ್ ಕುಮಾರ್ ಎಡಮಂಗಲ ಸಾಹಿತ್ಯ ಬರೆದಿದ್ದು, ಪದ್ಮರಾಜ್ ಬಿಸಿ ಚಾರ್ವಾಕ ನಿರ್ದೇಶನದಲ್ಲಿ ಮೂಡಿಬಂದಿದೆ. ಮಿಥುನ್ ರಾಜ್ ವಿದ್ಯಾಪುರರವರ ಮಿಕ್ಸಿಂಗ್ & ಮಾಸ್ಟರಿಂಗ್ ನಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ಜೈದೀಪ್ ಅಮ್ಮೆ ಧನುಶ್ರೀ ಅಜಿತ್, ನಮಿತಾ ತಾರನಾಥಾ,ಸುಚಿತ್ರಾ ನವೀನ್ ಹಾಗೂ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಸಹಕರಿಸಿದ್ದಾರೆ.