Connect with us

ಇತರ

ಫೆ:1-2 : ತಾಲೂಕಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಲೀಗ್ ಮಟ್ಟದ ಕ್ರಿಕೆಟ್ ಪಂದ್ಯಾಟ ಸೀಸನ್ -6 🏏 ಅಭಿರಾಮ್ ಫ್ರೆಂಡ್ಸ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ 🏏 ಸಂತ ಫಿಲೋಮಿನ ಕಾಲೇಜ್ ಕ್ರೀಡಾಂಗಣ ಪುತ್ತೂರು

Published

on

ಆಫಿಷಿಯಲ್ ಚಾಂಪಿಯನ್ ಟ್ರೋಫಿ
*8 ಇಲಾಖೆಗಳ ಪ್ರದರ್ಶನ ಪಂದ್ಯಾಟ
*ಪ್ರಥಮ ಸ್ಥಾನ ಪಡೆದ ತಂಡದ ಮ್ಹಾಲಕರಿಗೆ ಬೈಕ್

 

ಪುತ್ತೂರು; ಅಭಿರಾಮ್ ಫ್ರೆಂಡ್ಸ್ ಕ್ಲಬ್ ಪುತ್ತೂರು ವತಿಯಿಂದ ಹೊನಲು ಬೆಳಕಿನ 8 ತಂಡಗಳ ‘ಪುತ್ತೂರು ಪ್ರೀಮಿಯರ್ ಲೀಗ್ (ಪಿಪಿಎಲ್) ಮತ್ತು 8 ತಂಡಗಳ ಆಫಿಷಿಯಲ್ ಚಾಂಪಿಯನ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ಫೆ.1 ಮತ್ತು 2ರಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಭಿರಾಮ್ ಪ್ರೆಂಡ್ಸ್ ಕ್ಲಬ್‌ನ ಗೌರವಾಧ್ಯಕ್ಷ ನವೀನ್ ರೈ ಪಂಜಳ ತಿಳಿಸಿದರು.

 

ಜ.29ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರನೇ ವರ್ಷದ ಪಿಪಿಎಲ್ ಕ್ರಿಕೆಟ್ ಕ್ರೀಡಾಕೂಟದಲ್ಲಿ 4 ತಾಲೂಕುಗಳ ಒಟ್ಟು 8 ಆಹ್ವಾನಿತ ತಂಡಗಳು ಭಾಗವಹಿಸಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಆಟಗಾರರು ಭಾಗಿಯಾಗಲಿದ್ದಾರೆ. ಆಫಿಷಿಯಲ್ ಚಾಂಪಿಯನ್ ಟ್ರೋಫಿಯಲ್ಲಿಯೂ ತಾಲೂಕಿನ 8 ವಿವಿಧ ಇಲಾಖೆಗಳ ತಂಡಗಳು ಭಾಗಿಯಾಗಲಿವೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ.1ಲಕ್ಷ ಹಾಗೂ ದ್ವಿತೀಯ ಬಹುಮಾನ ರೂ.50 ಸಾವಿರ ಬಹುಮಾನ ಹಾಗೂ ಪಿಪಿಎಲ್ ಟ್ರೋಫಿ ನೀಡಲಾಗುವುದು. ಪುತ್ತೂರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರಥಮ ವಿಜೇತ ತಂಡದ ಮಾಲಕರಿಗೆ ಬೈಕ್ ಕೊಡುಗೆಯಾಗಿ ನೀಡಲಾಗುವುದು. ಜೊತೆಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.


 

ಫೆ.1ರಂದು ಬೆಳಿಗ್ಗೆ 10 ಗಂಟೆಗೆ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು, ಮಹಾಲಿಂಗೇಶ್ವರ ದೇವಳದ ಅರ್ಚಕ ವಸಂತ ಕೆದಿಲಾಯ ಅವರು ಉದ್ಘಾಟಿಸಲಿದ್ದಾರೆ. ನಗರಸಭಾ ಅಧ್ಯಕ್ಷತೆ ಲೀಲಾವತಿ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಂಜೆ 7 ಗಂಟೆಗೆ ಟ್ರೋಫಿ ಅನಾವರಣ ಸಮಾರಂಭ ನಡೆಯಲಿದ್ದು, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಪುತ್ತೂರಿನಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಜುಬಿನ್ ಮೊಹಾಪಾತ್ರ ಭಾಗಿಯಾಗಲಿದ್ದಾರೆ. ಮುಳಿಯ ಜ್ಯುವೆಲ್ಸ್ ಮುಖ್ಯ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸಹಿತ ಹಲವು ಗಣ್ಯರು ಆಗಮಿಸಲಿದ್ದಾರೆ.

 

ಫೆ.2ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವರಾಮ ಆಳ್ವ, ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

 

ಅಭಿರಾಮ್ ಫ್ರೆಂಡ್ಸ್ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬಂದಿದ್ದು, ಮುಖ್ಯವಾಗಿ ಸುಮಾರು 40 ವಿದ್ಯಾರ್ಥಿಗಳಿಗೆ ರೂ.1.50 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ನೀಡಿದೆ. ಅಲ್ಲದೆ ಪ್ರತೀ ವರ್ಷ ರಕ್ತದಾನ ಶಿಬಿರ, ಸ್ವಾತಂತ್ರ್ಯೋತ್ಸವದಂದು ಸರಕಾರಿ ಶಾಲೆಗಳಿಗೆ ಬೆಂಚ್, ಡೆಸ್ಕ್ ಇನ್ನಿತರ ಸೌಕರ್ಯಗಳನ್ನು ಒದಗಿಸುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವಾ ಕಾರ್ಯ ಮಾಡುವುದು ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ನವೀನ್ ರೈ ತಿಳಿಸಿದರು.

 

ಅಭಿರಾಮ್ ಫ್ರೆಂಡ್ಸ್‌ಕ್ಲಬ್ ಅಧ್ಯಕ್ಷ ಪ್ರಜಿತ್ ಮಂಜಲ್ಪಡ್ಪು, ಉಪಾಧ್ಯಕ್ಷ ಸನತ್, ಕಾರ್ಯದರ್ಶಿ ಪ್ರಮುಖ್, ನಿಕಟಪೂರ್ವ ಅಧ್ಯಕ್ಷ ತೇಜಕುಮಾರ್ ಕೆಮ್ಮಾಯಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement