Published
2 months agoon
By
Akkare Newsಮಂಗಳೂರು: ಒಕ್ಕಲಿಗರ ಗೌಡರ ಸೇವಾ ಸಂಘ ಯುವ ಘಟಕದ ಉಪಾಧ್ಯಕ್ಷ ಮಹೇಶ್ ನಡುತೋಟರವರು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಚುಣಾವಣೆಯಲ್ಲಿ ಸ್ಫರ್ಧಿಸಿ ಅತ್ಯಧಿಕ ಮತಗಳಿಂದ ಚುನಾಯಿತರಾಗಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.
ಮಹೇಶ್ ನಡುತೋಟ ಅವರು ಸುಬ್ರಹ್ಮಣ್ಯದ ಬಿಳಿನೆಲೆ ಗ್ರಾಮದ ಕೈಕಂಬದ ನಡುತೊಟ ಮನೆಯವರು. ಮಂಗಳೂರಿನಲ್ಲಿ ಉದ್ಯಮಿ ಯಾಗಿ ಕಳೆದ 15 ವರುಷದಿಂದ ನೆಲೆಸಿದ್ದಾರೆ. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯ ನಿರ್ದೇಶಕರಾಗಿದ್ದಾರೆ.
ದಿವಂಗತ ಚೆನ್ನಕೇಶವ ಗೌಡ ನಡುತೋಟ ಮತ್ತು ರುಕ್ಮಿಣಿ ದಂಪತಿ ಸುಪುತ್ತರಾಗಿದ್ದಾರೆ.