Published
12 months agoon
By
Akkare News
ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಒಂದು ವಾರಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ.



ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿಯಲ್ಲಿ ಮಳೆಯಾಗಲಿದೆ.


ಆಗುಂಬೆ, ಸುಳ್ಯ, ಗೋಕರ್ಣ, ಭಾಗಮಂಡಲ, ಉಡುಪಿ, ಕದ್ರಾ, ಕ್ಯಾಸಲ್ರಾಕ್, ಪುತ್ತೂರಿನಲ್ಲಿ ಭಾರಿ ಮಳೆಯಾಗಿದೆ. ಮಾಣಿ, ಕುಮಟಾ, ಯಲ್ಲಾಪುರ, ಕೋಟಾ, ಶೃಂಗೇರಿ, ಕಮ್ಮರಡಿ, ಮೂಡುಬಿದಿರೆ, ಸಿದ್ದಾಪುರ, ಕಾರ್ಕಳ, ಹೊನ್ನಾವರ, ಬಂಟವಾಳ, ಬೆಳ್ತಂಗಡಿ, ಕೊಟ್ಟಿಗೆಹಾರ, ಕೊಪ್ಪ, ಕಳಸ, ಜಯಪುರ, ಸೋಮವಾರಪೇಟೆ, ನಾಪೋಕ್ಲು, ಹುಂಚದಕಟ್ಟೆ, ಪೊನ್ನಂಪೇಟೆ, ಖಾನಾಪುರ, ಲೋಂಡಾ, ಶಕ್ತಿನಗರ, ಮುಲ್ಕಿ, ಧರ್ಮಸ್ಥಳ, ಜೋಯ್ಡಾ, ಅಂಕೋಲಾ, ಬಾಳೆಹೊನ್ನೂರು, ಆನವಟ್ಟಿ, ಭದ್ರಾವತಿ, ಜಗಳೂರು, ತ್ಯಾಗರ್ತಿ, ಕುಶಾಲನಗರ, ಅರಕಲಗೂಡು, ಮುಂಡಗೋಡು, ಹಳಿಯಾಳ, ಬೆಳಗಾವಿಯಲ್ಲಿ ಮಳೆಯಾಗಿದೆ.




