ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ‌ಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈ

Published

on

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು‌ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜಲಸಿರಿ ಅಧಿಕಾರಿಗಳ ಸಭೆಯನ್ನು ಶಾಸಕರು ಕರೆದಿದ್ದು, ಸಭೆ ನಡೆಯುತ್ತಿರುವ ವೇಳೆ ಅಲ್ಲಿಗೆ ಬಂದ ತಹಶಿಲ್ದಾರ್ ರೊಳಗೊಂಡ ಅಧಿಕಾರಿಗ ತಂಡ ನೀತಿ ಸಂಹಿತೆ ಸಡಿಲಿಕೆಯಾಗದ ಕಾರಣ ನೀವು ಸಭೆ ನಡೆಸುವಂತಿಲ್ಲ ಎಂದು ಸಭೆ ನಡೆಸದಂತೆ ತಿಳಿಸಿದ ಘಟನೆ ಮೇ.13 ರಂದು ನಡೆದಿದೆ.
ನಗರಸಭಾ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಸಮರ್ಪಕವಾದ ಕುಡಿಯುವ ನೀರಿಲ್ಲ.


ಎಂಟು ಝೋನ್ ವ್ಯಾಪ್ತಿಯಲ್ಲಿ ನೀರಿಲ್ಲದೆ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರು ನಗರಸಭೆ ಅಥವಾ ಜಲಸಿರಿ ಅಧಿಜಾರಿಗಳಿಗೆ ಕರೆ ಮಾಡಿದರೂ ಯಾವುದೇ ಸ್ಪಂದನೆ ಇಲ್ಲದ ಕಾರಣ ಶಾಸಕರು ಜಲಸಿರಿ ಅಧಿಕಾರಿಗಳ ಸಭೆಯನ್ನು ತನ್ನ ಕಚೇರಿಯಲ್ಲಿ ಕರೆದಿದ್ದರು. ಸಭೆ ಪ್ರಾರಂಭವಾಗಿ ಅರ್ಧ ತಾಸು ಬಳಿಕ ಸಭೆಗೆ ಆಗಮಿಸಿದ ಶಾಸಕರನ್ನೊಳಗೊಂಡ ಅಧಿಕಾರಿಗಳ ತಂಡ ಚುನಾವಣಾ ನೀತಿ‌ಸಂಹಿತೆ ಇರುವ ಕಾರಣ ಯಾವುದೇ ಸಭೆ ನಡೆಸುವಂತಿಲ್ಲ ಎಂದು ಶಾಸಕರಿಗೆ ಹೇಳಿದರು.

ನಾನು ಕಾನೂನಿಗೆ ಗೌರವ ಕೊಡುತ್ತೇನೆ.
ನೀವು ಸಮಸ್ಯೆಗೆ ಸ್ಪಂದಿಸದೆ ಇರುವ ನಾನು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ನೀತಿ ಸಂಹಿತೆ ಇದೆ ಎಂದು ಜನರು ನೀರು ಕುಡಿಯದೆ ಇರ್ಲಿಕ್ಕೆ ಆಗ್ತದಾ? ಚುನಾವಣೆ ಕಳೆದರೂ ಇಲ್ಲಿರುವ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದನೆ ನೀಡದೇ ಇದ್ದರೆ ಜನಪ್ರತಿನಿಧಿಯಾದ ನಾನು ಸಮಸ್ಯೆಗೆ ಸ್ಪಂದಿಸಬೇಕಾಗಿದ್ದು ನನ್ನ ಕರ್ತವ್ಯವಾಗಿದೆ.







ನೀತಿ‌ಸಂಹಿತೆಗೆ ನಾನು ಗೌರವ ಕೊಡುತ್ತೇನೆ ಆದರೆ ಅದೇ ನೆಪ ಹೇಳಿ ಜನರಿಗೆ ಕುಡಿಯುವ ನೀರು ಕೊಡದೆ ಇರ್ಲಿಕ್ಕೆ ಆಗುವುದಿಲ್ಲ ಎಂದು ಹೇಳಿದ ಶಾಸಕರು ನಾನು ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ನಗರಸಭಾ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕುಡಿಯುವ ನೀರು ತಲುಪಬೇಕು, ಗಾಳಿ ಮಳೆಗೆ ಹಾನಿಯಾದರೆ ತಕ್ಷಣ ವ್ಯವಸ್ಥೆ ಮಾಡಬೇಕು, ಗಂಜಿ ಕೇಂದ್ರ ತೆರೆದು ಜನರಿಗೆ ಅನ್ನ ಹಾಕಬೇಕು.

ಎರಡು ದೊನದೊಳಗೆ ಈ ವ್ಯವಸ್ಥೆ ಮಾಡಬೇಕು. ನೀವು ಈ ವ್ಯವಸ್ಥೆ ಮಾಡದೇ ಇದ್ದರೆ ಸಂಬಂದಪಟ್ಟ ಕಚೇರಿಯಲ್ಲಿ ನಾನು ಧರಣಿ ಕೂರಬೇಕಾಗುತ್ತದೆ ಎಂದು ತಿಳಿಸಿದರು. ನೀತಿ ಸಂಹಿತೆ ಸಡಿಲಿಕೆಯಾಗದ ಕಾರಣ ಕಚೇರಿಯೂ ತೆರೆಯುವಂತಿಲ್ಲ ಎಂದು ಅಧಿಕಾರಿಗಳ ಶಾಸಕರ ಸರಕಾರಿ ಕಚೇರಿಯನ್ನು ಬಂದ್ ಮಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement