ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಇರ್ದೆ- ಪೇರಳ್ತಡ್ಕ ನವೀಕೃತ ಜುಮಾ ಮಸೀದಿ ಉದ್ಘಾಟನೆ

Published

on

  • ಪರಸ್ಪರ ಸೌಹಾರ್ಧತೆಯಿಂದ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ: ಅಶೋಕ್ ರೈ

ಪುತ್ತೂರು: ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತವಾಗಿದೆ, ದೇಶದ ಸ್ವಾತಂತ್ರ್ಯಕ್ಕೆ ಇಲ್ಲಿರುವ ಎಲ್ಲಾ ಧರ್ಮಗಳ ನೇತಾರರು ಹೋರಾಟ ಮಾಡಿದ್ದಾರೆ , ಪ್ರಾಣತ್ಯಾಗವನ್ನು ಮಾಡಿದ್ದಾರೆ. ನಮ್ಮ ದೇಶಕ್ಕೆ ಸುಲಭದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ ಆದರೆ ನಾವಿಂದು ದೇಶದ ಇತಿಹಾಸವನ್ನು ಮರೆತು ಧರ್ಮ, ಜಾತಿಯ ಹೆಸರಿನಲ್ಲಿ ಕಚ್ಚಾಟ ನಡೆಸಿ ಭಾರತದ ಸೌಂದರ್ಯವನ್ನೇ ಹಾಳುಮಾಡುತ್ತಿದ್ದೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಬೆಟ್ಟಂಪಾಡಿ ಗ್ರಾಮದ ಇರ್ದೆ ಪೇರಲ್ತಡ್ಕ ನವೀಕೃತಗೊಂಡ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಧರ್ಮಗಳು ನ್ಯಾಯ, ಸತ್ಯ, ಅಹಿಂಸೆಯನ್ನೇ ಕಲಿಸುತ್ತದೆ, ಆದರೆ ಆ ಧರ್ಮವನ್ನು ನಂಬಿರುವ ನಾವು ನಾನು ಮೇಲು ಅವನು ಕೀಲು ಎಂಬ ದೃಷ್ಟಿಯಿಂದ ಕಚ್ಚಾಟ ಮಾಡುತ್ತಿದ್ದೇವೆ ಇದು ಸಲ್ಲದು, ಭಾರತ ವಿಶ್ವಗುರುವಾಗಬೇಕಾದರೆ ದೇಶದಲ್ಲಿ ಕೋಮು ಸೌಹಾರ್ಧತೆ ನೆಲೆಯೂರಬೇಕು, ಪ್ರತೀಯೊಬ್ಬ ಭಾರತೀಯರೂ ಒಂದೇ ತಾಯಿ ಮಕ್ಕಳಂತೆ ಬಾಳಿಬದುಕಬೇಕಾಗಿದೆ ಎಂದು ಹೇಳಿದರು.ನೊಂದವರಿಗೆ ನಾವು ಧರ್ಮ , ಜಾತಿ ನೋಡದೆ ಸಹಾಯ ಮಾಡುವ , ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಇದ್ದಲ್ಲಿ ಮಾತ್ರ ನಮ್ಮ ಊರು ಶಾಂತಿಯ ನೆಲೆ ಬೀಡಾಗಲು ಸಾಧ್ಯ ಎಂಬುದನ್ನು ಪ್ರತೀಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು ರಾಜಕೀಯ ಲಾಭಕ್ಕೋಸ್ಕರ ಕೆಲವೊಂದು ರಾಜಕೀಯ ಪಕ್ಷಗಳು ಇಲ್ಲಿ ಕೋಮು ವಿಷ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದೆ ಇದರ ಬಗ್ಗೆ ಜನರಲ್ಲಿ ಜಾಗೃತಿಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಮಂಜೇಶ್ವರ ಸಾಸಕರಾದ ಎಂ ಕೆ ಎಂ ಅಶ್ರಫ್‌ರವರು ಮಾತನಾಡಿ ಭಾರತದ ಜಾತ್ಯಾತೀತ ತತ್ವ ಅದು ಎಂದೆಂದೂ ಇಲ್ಲಿ ನೆಲೆ ನಿಲ್ಲಿದೆ ಅದನ್ನು ತೊಡೆದು ಹಾಕಲು ಯಾವ ಕೋಮು ಶಕ್ತಿಗೂ ಸಾಧ್ಯವಿಲ್ಲ. ದೇಶದಲ್ಲಿ ೯೦ ಶೇ. ಜನರಲ್ಲಿ ಹರಿಯುವ ರಕ್ತ ಅದು ಸೌಹಾರ್ಧತೆಯ ರಕ್ತವಾಗಿದೆ. ದೇಶದ ಮೊದಲ ಸ್ವಾತಂತರ್‍ಯ ಹೋರಾಟವನ್ನು ಆರಂಭ ಮಾಡಿದ್ದು ಓರ್ವ ಮುಸ್ಲಿಂ ಧರ್ಮಗುರುವಾಗಿದ್ದರ ಅವರಿಗೆ ಇಲ್ಲಿನ ಶೇ.೧೦೦ ಹಿಂಧೂ ಬಂಧುಗಳು ಬೆಂಬಲ ನೀಡಿದ್ದರು ಎಂಬ ಇತಿಹಾಸವನ್ನು ನಾವು ಮರೆಯಬಾರದು. ದೇಶದ ಸೌಹಾರ್ಧತೆಯನ್ನು ಹಾಳು ಮಾಡುವ ಶಕ್ತಿಗಳ ವಿರುದ್ದ ನಾವು ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು. ಕೆಪಿಸಿಸಿ ಸಂಯೋಜಕರಾದ ಕವು ಹೇಮನಾಥ ಶೆಟ್ಟಿ ಮಾತನಾಡಿ ಸೌರ್ಹಾರ್ಧತೆ ಎಂಬುದು ಹೃದಯದಲ್ಲಿ ಹುಟ್ಟುವಂತದ್ದು ಕೋಮುವಾದ ಮೈಗೂಡಿಸಿಕೊಂಡಲ್ಲಿ ಈ ದೇಶದಲ್ಲಿ ಬದುಕುವುದು ಕಷ್ಟ ಸಾಧ್ಯವಾಗಿದೆ. ಕೋಮುವಾದವನ್ನು ಮಾಡಿ ಜನರ ನಡುವೆ ಕಲಹ ಸೃಷ್ಟಿಸಿದವರು ಯಾವ ಸಾಧನೆಯನ್ನು ಮಾಡಿಲ್ಲ, ಇನ್ನೂ ಮಾಡುವುದು ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಹಾಗೂ ಮಂಜೇಶ್ವರ ಶಾಕರಾದ ಎಂ ಕೆ ಎಂ ಅಶ್ರಫ್‌ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಸ್ವಾಗತಿಸಿದರು. ಆಸಿಫ್ ಹಾಜಿ ತಂಬುತ್ತಡ್ಕ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version