ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಮುಂಡೂರು:ಹಿಂದಾರು -ಮರ್ತಡ್ಕ ಹಾಗೂಗುತ್ತಿನಪಾಲು ನೂತನ ರಸ್ತೆ ಉದ್ಘಾಟನೆ

Published

on

  • ಈಗ ನಡೆಯುವ ಮತ್ತು ಉದ್ಘಾಟನೆಗೊಳ್ಳುವ ಎಲ್ಲಾ ಕಾಮಗಾರಿಗಳು ಕಾಂಗ್ರೆಸ್ ಸರಕಾರದ ಅನುದಾನವಾಗಿದೆ: ಶಾಸಕ ರೈ

 

ಪುತ್ತೂರು: ಚುನಾವಣೆಗೆ ಮೊದಲು ತರಾತುರಿಯಲ್ಲಿ ಬಿಜೆಪಿ ಸರಕರ ಕೆಲವೊಂದು ರಸ್ತೆಗಳನ್ನು ಶಿಲಾನ್ಯಾಸ ಮಾಡಿತ್ತು, ಅನುದಾನ ನೀಡುವುದಾಗಿಯೂ ಹೇಳಿತ್ತು, ಆದರೆ ಅನುದಾನವನ್ನು ನೀಡದೆ ಕೇವಲ ಶಿಲಾನ್ಯಾಸ ಮಾತ್ರ ನೆರವೇರಿಸಿತ್ತು, ಚುನಾವಣೆ ಬಳಿಕ ಬಿಜೆಪಿಯವರು ಸಿಲಾನ್ಯಾಸಗೈದ ಕಾಮಗಾರಿಗೆ ಕಾಂಗ್ರೆಸ್ ಸರಕಾರ ಅನುದಾನ ನೀಡಿದೆ ಈಗ ಉದ್ಘಾಟನೆಗೊಳ್ಳುವ ಎಲ್ಲಾ ಕಾಮಗಾರಿಗಳಿಗೂ ಕಾಂಗ್ರೆಸ್ ಸರಕಾರದ್ದೇ ಅನುದಾನವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವು ಮುಂಡೂರು ಗ್ರಾಮದ ಹಿಂದಾರು- ಮರ್ತಡ್ಕ ಮತ್ತು ಮುಂಡೂರು ಗುತ್ತಿನಪಾಲು ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯನ್ನು ತಂದಿರುವ ಕಾರಣ ಕಾಮಗಾರಿಗೆ ನೀಡಲು ಸರಕಾರದ ಬಳಿ ಹಣವಿಲ್ಲ, ಯಾವುದೇ ಕಾಮಗಾರಿಗಳು ಇನ್ನು ಮುಂದೆ ನಡೆಯುವುದಿಲ್ಲ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಅದೆಲ್ಲವೂ ಸುಳ್ಳು ಪುತ್ತೂರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ೯೬೫ ಕೋಟಿ ರೂ ಕುಡಿಯುವ ನೀರಿಗೆ ಸರಕಾರ ನೀಡಿದೆ ಎಂದು ಶಾಸಕರು ಹೇಳಿದರು. ರಸ್ತೆ, ಮೋರಿ, ಸೇತುವೆ ಸೇರಿದಂತೆ ಸಣ್ಣಪುಟ್ಟ ಕಾಮಗಾರಿಗಳು ಮತ್ತು ಮೂಲಭೂತ ಸೌಕರ್ಯಕ್ಕೆ ಸರಕಾರದ ಅನುದಾನ ಬರುತ್ತಲೇ ಇದೆ. ಈಗಾಗಲೇ ಕೋಟ್ಯಂತರ ರೂ ಅನುದಾನ ಬಿಡುಗಡೆಯಾಗಿದ್ದು ಸಮಪ್ರಮಾಣದಲ್ಲಿ ಹಂಚಿಕೆ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

 

ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ

ಗೃಹ ಲಕ್ಷ್ಮಿ ಯೋಜನೆಯ ಹಣ ಹಲವರ ಖಾತೆಗೆ ಇನ್ನೂ ಬಂದಿಲ್ಲ. ತಾಂತ್ರಿಕ ದೋಷಗಳಿಂದಾಗಿ ಬಾಕಿಯಾಗಿದೆ ಹಣ ಬಾರದೆ ಇರುವ ಎಲ್ಲರಿಗೂ ಹಣ ಬಂದೇ ಬರುತ್ತದೆ ಯಾವುದೇ ಆತಂಕ ಬೇಡ. ಕಾಂಗ್ರೆಸ್ ಸರಕಾರ ಎಂದಿಗೂ ಬಡವರಿಗೆ ವಂಚನೆ ಮಾಡಿಲ್ಲ, ಬಡವರನ್ನು ಮೇಲಕ್ಕೆತ್ತುವ ಕಾರ್ಯವನ್ನೇ ಕಾಂಗ್ರೆಸ್ ಮಾಡಿದ್ದು ಯಾವುದೇ ಅಪಪ್ರಚಾರಗಳಿಗೆ ಕಿವೊಗೊಡಬೇಡಿ ಎಂದು ಶಾಸಕರು ಹೇಳಿದರು. ಕಾಂಗ್ರೆಸ್ ಸರಕಾರ ಬಂದ ಮೇಲೆ ಜನ ನೆಮ್ಮದಿಯಿಂದ ಇದ್ದಾರೆ ಇದನ್ನು ಸಹಿಸಲು ಸಾಧ್ಯವಾಗದ ವಿರೋಧ ಪಕ್ಷದವರು ಸರಕಾರದ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಾ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕಾವು ಹೇಮನಾಥ ಶೆಟಿ ಮಾತನಾಡಿ ಕಾಂಗ್ರೆಸ್ ಸರಕಾರ ಜನತೆಗೆ ಎಲ್ಲವನ್ನೂ ಕೊಡುತ್ತಿದೆ, ದೇಶದ ಇತಿಹಾಸದಲ್ಲೇ ಮೊದಲು ಎಂಬಂತೆ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ನೀಡುತ್ತಿದೆ. ಕೇಂದ್ರದ ಮೋದಿ ಸರಕಾರದ ಬೆಲೆ ಏರಿಕೆ ನೀತಿಯಿಂದಾಗಿ ಜನ ಕಂಗಾಲಾಗಿದ್ದಾರೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಜನರ ಹಸಿವು ನೀಗಿಸುವ ಕೆಲಸವನ್ನು ಮಾಡಿದೆ. ಜನತೆ ಯಾವುದನ್ನು ನಿರೀಕ್ಷೆ ಇಟ್ಟುಕೊಂಡಿದ್ದರೋ ಆ ನಿರಿಕ್ಷೆಗಳೆಲ್ಲವನ್ನೂ ಕಾಂಗ್ರೆಸ್ ಸರಕಾರ ಈಡೇರಿಸುತ್ತಿದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಬಡವರ ಪರವಾಗಿರುವ ಕಾಂಗ್ರೆಸ್ ಸರಕಾರ ಜನತೆಗೆ ಸ್ವಾಬಿಮಾನದ ಬದುಕನ್ನು ಕರುಣಿಸಿದೆ, ಪುತ್ತೂರು ಕ್ಷೇತ್ರ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ದಿ ಕಾಣಲಿದ್ದು ಸಮರ್ಥ ಶಾಸಕರು ಪುತ್ತೂರಿನ ಲ್ಲಿದ್ದಾರೆ ಎಂದು ಹೇಳಿದರು.ವೇದಿಕೆಯಲ್ಲಿ ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮುಖಂರಾದ ಉಮಾನಾಥ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಮುಂಡೂರು ವಲಯ ಕಾಂಗ್ರೆಸ್ ಉಸ್ತುವಾರಿಯಾದ ಯಾಕುಬ್ ಮುಲಾರ್, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸುಪ್ರೀತ್ ಕಣ್ಣಾರಾಯ, ಮುಂಡೂರು ಕಾಂಗ್ರೆಸ್ ಬೂತ್ ಅಧ್ಯಕರುಗಳಾದ ಇಬ್ರಾಹಿಂ ಮುಲಾರ್, ಗಣೇಶ್ ಬಂಗೇರ ಕೊರುಂಗು, ಸಂಜೀವ ಪುಜಾರಿ ಕುರೆಮಜಲು ಹಾಗೂ ಪದ್ಮಯ್ಯ ನಾಯ್ಕ ಬಂಡಿಕಾನ, ಪಂಚಾಯತ್ ಸದಸ್ಯರುಗಳಾದ ಕಮಲೇಶ್ ಸರ್ವೆದೊಳಗುತ್ತು, ಬಾಲಕೃಷ್ಣ ಕುರೆಮಜಲು ಹಾಗೂ ಮೊಹಮ್ಮದ್ ಅಲಿ, ಮಾಜಿ ಪಂಚಾಯತ್ ಸದಸ್ಯರುಗಳಾದ ಮಹೇಶ್ಚಂದ್ರ ಸಾಲಿಯಾನ್ ಹಾಗೂ ಹಲವಾರು ಗಣ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಅನುಕ್ರಮವಾಗಿ ಶ್ರೀ ದಿನೇಶ್ ಮಾರ್ತ ಹಾಗೂ ಶ್ರೀ ಮೊಹಮ್ಮದ್ ಮುಂಡೂರು ಇವರುಗಳ ಮನೆಯಲ್ಲಿ ಸಭೆಗಳನ್ನು ಆಯೋಜಿಸಲಾಯಿತು.

ಹಿಂದಾರು -ಮರ್ತಡ್ಕ ಉಸ್ತುವಾರಿ ಯಾಕುಬ್ ಮುಲಾರ್ ಸ್ವಾಗತಿಸಿ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version