ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

2024 ಹೊಸ ವರ್ಷ ಆಚರಣೆ ಸರಕಾರದ ಮಾರ್ಗಸೂಚಿ ಪ್ರಕಟ ಜ್ವಾಲಿ ಮೂಡಿನವರಿಗೆ ಶಾಕ್ !!!?

Published

on

ಬೆಂಗಳೂರು: ವರ್ಷಾಚರಣೆಗೆ ಇನ್ನೂ ಕೆಲವೇ ದಿನಗಳ ಮಾತ್ರ ಬಾಕಿ ಇದೆ. ಸಿಲಿಕಾನ್ ಸಿಟಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಸಲ ಭಾರೀ ಭದ್ರತೆ ನೀಡಲು ಬೆಂಗಳೂರು ನಗರ ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.ಹೊಸ ವರ್ಷಕ್ಕೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯಿಂದ ಗೈಡ್ ಲೈನ್ಸ್ ರೆಡಿ ಮಾಡಿದ್ದು, ಇದರಿಂದ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು ಬೀಳಲಿದೆ. ಈ ಬಾರೀ ಹೆಚ್ಚು ಸಿಸಿಟಿವಿ ಅಳವಡಿಕೆಗೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ಅದರಲ್ಲೂ ಈ ಬಾರಿ ಪಾಲಿಕೆ, ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದೆ.

ಗೈಡ್ ಲೈನ್ಸ ಹೀಗಿದೆ:
• ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು.
• ಎಂ.ಜಿ.ರಸ್ತೆ,ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ.
• ರಾತ್ರಿ 10 ಗಂಟೆ ಬಳಿಕ ಪ್ರಮುಖ ಫೈ ಓವರ್ ಗಳು ಬಂದ್.
• ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ.
• ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್.
• ಸೆಲೆಬ್ರೇಷನ್ ಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.
• ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ.
• ಬಾರ್, ಪಬ್ ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್ ಗೆ ಸೂಚನೆ.
• ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ.
• ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ.
• ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರ.
• ರಾತ್ರಿ 1 ಗಂಟೆ ತನಕ ನಮ್ಮ ಮೆಟ್ರೋ ಸಂಚಾರ.



Continue Reading
Click to comment

Leave a Reply

Your email address will not be published. Required fields are marked *

Advertisement