Published
12 months agoon
By
Akkare Newsಪುತ್ತೂರು: ವಿದ್ಯೆ ಎಲ್ಲರೂ ಕಲಿಯಬೇಕು, ವಿದ್ಯಾವಂತ ಸತ್ಪಜೆಗಳಿಂದ ಭಾರತ ವಿಶ್ವ ಗುರುವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.ಅವರು ಕೇಪು ಗ್ರಾಮದ ಪಡಿಬಾಗಿಲು ವಿದ್ಯಾಗಿರಿ ಸರಕಾರಿ ಹಿ.ಪ್ರಾ.ಶಾಲಾ ಬೆಳ್ಳಿ ಹಬ್ಬ ಮತ್ತು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊತೆಯುತ್ತದೆ, ಶಾಲೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯದ ಕೊರತೆಯಿಲ್ಲ, ಶಿಕ್ಷಕರ ಕೊರತೆಯೂ ಇಲ್ಲ. ಮಕ್ಕಳಿಗೆ ಕಲಿಯಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಸರಕಾರ ಮಾಡುತ್ತಿದೆ.ಗ್ರಾಮಸ್ಥರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವ ಮೂಲಕ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮಕ್ಕೆ ಎರಡು ಕೆಪಿಎಸ್ ಸ್ಕೂಲ್ ಆರಂಭ ಮಾಡಲಾಗುವುದು. ಇದಕ್ಕಾಗಿ 2500 ಕೋಟಿ ರೂ ಮೀಸಲಿಡಲಾಗಿದೆ ಎಂದು ಹೇಳಿದರು.
ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣ ಒಂದು ಬಾರಿಯೂ ಬಾರದೇ ಇದ್ದರೆ ಶಾಸಕರ ಕಚೇರಿಗೆ ಬಂದು ಸರಿಮಾಡಿಕೊಳ್ಳಿ ಎಂದು ಹೇಳಿದ ಶಾಸಕರು ಯಾವುದೇ ಕೆಲಸ ಆಗದೇ ಇದ್ದರೂ ನನ್ನ ಕಚೇರಿಯಲ್ಲಿರುವ ಸಿಬ್ಬಂದಿಗಳನ್ನು ಭೇಟಿಯಾಗಿ ಪರಿಹರಿಸಿಕೊಳ್ಳಿ ಎಂದು ಶಾಸಕರು ಮನವಿ ಮಾಡಿದರು.