Published
12 months agoon
By
Akkare Newsಪುತ್ತೂರು: ಎಂ ಆರ್ ಪಿ ಎಲ್ ಸಂಸ್ಥೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಶಾಲೆಗಳಿಗೆ ಒಟ್ಟು ಮೂರು ಕೋಟಿ ಅನುದಾನ ಬಂದಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಮುಂಡೂರು ಸರಕಾರಿ ಹಿ ಪ್ರಾ ಶಾಲೆಯಲ್ಲಿ ಎಂಆರ್ ಪಿಎಲ್ ಸಂಸ್ಥೆಯಿಂದ 40 ಲಕ್ಷ ರೂ ವೆಚ್ಚದಲ್ಲಿನಿರ್ಮಾಣವಾಗುತ್ತಿರುವ ಶಾಲಾ ನೂತನ ಕೊಠಡಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಎಂಆರ್ ಪಿಎಲ್ ಆರಂಭವಾಗುವಾಗ ಭಾರೀ ವಿರೋಧ ವ್ಯಕ್ತವಾಗಿತ್ತು ಆದರೆ ಈಗ ಅದೇ ಸಂಸ್ಥೆ ಇಂದು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ದ ಕ ಜಿಲ್ಲೆಯಿಂದ ಸರಕಾರಕ್ಕೆ ಬಹುದೊಡ್ಡ ರಾಜಸ್ವ ವಸೂಲಿಯಾಗುತ್ತಿದೆ ಆದರೆ ನಮ್ಮೂರಿಗೆ ಅನುದಾನ ಪಡೆದುಕೊಳ್ಳುವಲ್ಲಿ ನಮ್ಮವರಿಗೆ ಆಸಕ್ತಿ ಕಡಿಮೆ ಇದೆ. ಶಾಶ್ವತ ಯೋಜನೆಯನ್ನು ಜಿಲ್ಲೆಗೆ ತರುವ ಮೂಲಕ ಇಲ್ಲಿ ಅಭಿವೃದ್ದಿ ಯೋಜನೆಗಳನ್ನು ತಂದು ಯುವಕರಿಗೆ ಉದ್ಯೋಗ ಕೊಡುವ ಕೆಲಸವನ್ನು ಮಾಡಬೇಕಿದೆ ಎಂದು ಶಾಸಕರು ಹೇಳಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರವನ್ನು ಕೊಡಬೇಕಿದೆ. ಮಕ್ಕಳು ಆಯಾ ಪ್ರಾಯಕ್ಕೆ ತಕ್ಕಂತೆ ದೇಹದ ಬೆಳವಣಿಗೆಯೂ ಆಗಬೇಕಿದೆ. ಮಕ್ಕಳನ್ನು ಆಸ್ತಿಯಾಗಿ ಬೆಳಸುವ ಮೂಲಕ ಮುಂದಿನ ದಿನಗಳಲ್ಲಿ ಅವರನ್ನು ದೇಶದ ಸಂಪತ್ತಾಗಿ ಪರಿವರ್ತಿಸಬೇಕು ಎಂದು ಹೇಳಿದರು.ಪ್ರತೀ ಎರಡು ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್ ಪ್ರಾರಂಭ ಮಾಡಲಾಗುವುದು.
ದಯವಿಟ್ಟು ಕ್ಷಮಿಸಿ…
ನಾನು ಕಾರ್ಯಕ್ರಮಕ್ಕೆ ಬರುವಾಗ ತಡವಾಗುತ್ತಿದೆ. ನಾನು ಉದ್ದೇಶಪೂರ್ವಕವಾಗಿ ತಡಮಾಡುತ್ತಿಲ್ಲ. ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಒಂದಷ್ಟು ಬಡವರು ಬರುತ್ತಾರೆ, ಅರ್ಜಿ ಹಿಡಿದುಕೊಂಡು ಮುಂದೆ ಬರುತ್ತಾರೆ. ನನ್ನ ಹುಡುಕಿಕೊಂಡು ಬರುವ ಬಡವರನ್ನು ಬಿಟ್ಟು ಬರಲು ನನಗೆ ಸಾಧ್ಯವಾಗುತ್ತಿಲ್ಲ. ಬಡವರ ಮೇಲಿನ ಪ್ರೀತಿ ಅವರ ಮುಂದೆ ನನ್ನನ್ನು ಕಟ್ಟಿ ಹಾಕುತ್ತಿದೆ ಈ ಕಾರಣಕ್ಕೆ ನಾನು ಪ್ರತೀ ಕಾರ್ಯಕ್ರಮಕ್ಕೆ ಬರುವಾಗ ತಡವಾಗುತ್ತದೆ ದಯವಿಟ್ಟು ನನ್ನನ್ನು ಕ್ಷಮಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಮುಂಡೂರು ನೂತನ ಶಾಲಾ ಕಟ್ಟಡಕ್ಕೆ ಶಾಸಕರಿಂದ ಶಿಲಾನ್ಯಾಸ ಎಂಆರ್ ಪಿಎಲ್ ಸಂಸ್ಥೆಯಿಂದ ನಾಲ್ಕು ಕೊಠಡಿಗೆ 40 ಲಕ್ಷ ಅನುದಾನಮಂಜೂರು.ವೇದಿಕೆಯಲ್ಲಿ ಎಸ್ ಎಂಸಿ ಅಧ್ಯಕ್ಷರಾದ ರಮೇಶ್ ಗೌಎ ಪಜಿಮಣ್ಣು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಧೈಹಿಕ ಶಿಕ್ಣಣಪರಿವೀಕ್ಷಕ ಸುಂದರ ಗೌಡ, ಎಂಆರ್ ಪಿಎಲ್ ಸಹಾಯಕ ಮೆನೆಜರ್ ಪ್ರದೀಪ್, ಮುಂಡೂರು ಸಿ ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ದಾನಿ ಗುಲಾಬಿ ಶೆಟ್ಟಿ,ಇಬ್ರಾಹಿಂ ಮುಲಾರ್, ಎಸ್ ಡಿಎಂಸಿಮಾಜಿ ಅಧ್ಯಕ್ಷ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿಜಯಾ ಪಿ ಸ್ವಾಗತಿಸಿದರು.ಶಿಕ್ಷಕರಾಮಚಂದ್ರ ವಂದಿಸಿದರು. ಶಿಕ್ಷಕಿ ಶಶಿಕಲಾ ಕಾರ್ಯಕ್ರಮನಿರೂಪಿಸಿದರು.