ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ, ಕೊನೆಯ ದಿನಾಂಕ ಮುಂದೂಡಿಕೆಗೆ ಮನಸ್ಸು ಬದಲಾಯಿಸಿಲಿದೆಯೆ ರಾಜ್ಯ ಸರ್ಕಾರ , ಇಲ್ಲಿದೆ ವಿವರ !?

Published

on

ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ಅಳವಡಿಕೆಗೆ ಈಗಾಗಲೇ ಫೆಬ್ರವರಿ 17 ಕೊನೆಯ ದಿನಾಂಕ ಎಂದು ನಿಗದಿ ಆಗಿದೆ. ಆದರೀಗ ಕೊನೇ ಕ್ಷಣಕ್ಕೆ ರಾಜ್ಯ ಸರ್ಕಾರ ಮನಸ್ಸು ಬದಲಾಯಿಸಿದ್ದು, ನಂಬರ್ ಪ್ಲೇಟ್ ಅಳವಡಿಕೆಯ ಕೊನೆಯ ದಿನಾಂಕವನ್ನು ಮುಂದೂಡಲು ಚಿಂತನೆ ನಡೆಸಿದೆಯಂತೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಗಳು ಇನ್ನು ಲಭ್ಯವಾಗಿಲ್ಲ. ಆದರೆ HSRP ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಸುಲಭೋಪಾಯ ಇಲ್ಲಿದೆ.

ಹೌದು, HSRP ನಂಬರ್ ಪ್ಲೇಟ್ ಅಳವಡಿಸದಿದ್ದರೆ ಸರ್ಕಾರವು 1000 ರೂ ಫೈನ್ ಹಾಕಲಿದೆ. ಅಲ್ಲದೆ ಎರಡೇ ಸಲವೂ ನಂಬರ್ ಪ್ಲೇಟ್ ಹಾಕಿಸದೆ ರಸ್ತೆಗಿಳಿದರೆ 2000 ಫೈನ್ ಬೀಳುತ್ತದೆ ಎಂಬ ಸುದ್ದಿ ಸದ್ದುಮಾಡುತ್ತಿದೆ. ಆದರೆ ಈ ದಂಡದಿಂದ ಪಾರಾಗಲು ವಾಹನ ಸವಾರರಿಗೆ ಒಂದು ಸುಲಭವಾದ ದಾರಿ ಇದೆ. ಏನದು ಗೊತ್ತಾ?

ಫೈನ್ ನಿಂದ ಪಾರಾಗುವುದು ಹೇಗೆ?
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದ್ವಿಚಕ್ರ ವಾಹನಗಳಿಗೆ 390 ರಿಂದ 440 ರೂ.ಗಳು. ಮತ್ತು 4 ಚಕ್ರದ ವಾಹನಗಳಿಗೆ 680 ರಿಂದ 690 ರೂ.ಗಳ ದಂಡ ವಿಧಿಸಲಾಗುತ್ತದೆ. ಕಾನೂನಿನಲ್ಲಿ ಮೊದಲ ಸಲ 1000 ರೂ., 2ನೇ ಸಲ 2 ಸಾವಿರ ರೂ. ತನಕ ದಂಡ ವಿಧಿಸಲು ಸಹ ಅವಕಾಶವಿದೆ.





ಹೀಗಾಗಿ ಮೊದಲು ನೀವು HSRP ನಂಬರ್ ಪ್ಲೇಟ್ ಅವಳಡಿಕೆ ಮಾಡಲು ಹೆಚ್ಎಸ್ಆರ್‌ಪಿ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಸ್ಥಳಕ್ಕೆ ಅನುಗುಣವಾಗಿ ಡೀಲರ್‌ ಸ್ಥಳವನ್ನು ಆಯ್ಕೆ ಮಾಡಬೇಕು. ಆನ್‌ಲೈನ್ ಮೂಲಕ ಶುಲ್ಕವನ್ನು ಪಾವತಿ ಮಾಡಿದರೆ, ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅನುಕೂಲಕ್ಕೆ ತಕ್ಕಂತೆ ದಿನಾಂಕ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಶುಲ್ಕ ಪಾವತಿ ಮಾಡಿದ ಬಳಿಕ ರಶೀದಿಯನ್ನು ಜೋಪಾನವಾಗಿ ಇಟ್ಟುಕೊಳ್ಳಿ.

ಅಂದಹಾಗೆ ಸಾರಿಗೆ ಇಲಾಖೆ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ನೋಂದಣಿ ಮಾಡಿದ 30 ದಿನಗಳ ಕಾಲ ರಶೀದಿ ತೋರಿಸಿದರೆ ದಂಡ ಹಾಕದಿರಲು ತೀರ್ಮಾನಿಸಿದೆ. ಆದ್ದರಿಂದ ಈಗಲೇ ನೋಂದಣಿ ಮಾಡಿಸಿ ದಂಡ ಕಟ್ಟುವುದರಿಂದ ವಾಹನ ಸವಾರರು ಪಾರಾಗಬಹುದು. ಇನ್ನೂ ಕೂಡ ಯಾರು ನಂಬರ್ ಪ್ಲೇಟ್ ಅಪ್ಲೇ ಮಾಡಿಲ್ಲವೋ ಅವರು ಈ ಕೂಡಲೇ ತಕ್ಷಣ ಮಾಡಿ, ರಶೀದಿ ಪಡೆದು ದಂಡದಿಂದ ಪಾರಾಗಿ.

Continue Reading
Click to comment

Leave a Reply

Your email address will not be published. Required fields are marked *

Advertisement