ಅಭಿವೃದ್ಧಿ ಕಾರ್ಯಗಳು ಆರೋಗ್ಯ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಫೆ.22 ರಂದು ಕೋಡಿಂಬಾಡಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮPublished
10 months agoon
By
Akkare Newsಫೆ19: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಪುತ್ತೂರು ತಾಲೂಕು ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು, ಪಶು ಚಿಕಿತ್ಸೆ ಕೇಂದ್ರ ಕೋಡಿoಬಾಡಿ ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತು ಇದರ ಸಂಯುಕ್ತ ಆಶ್ರಯದಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ 22/2/2024ನೇ ಗುರುವಾರ ನಡೆಯಲಿದೆ.
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನಾಂಕ:22.02.2024ರಂದು ಹುಚ್ಚು ನಾಯಿ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ ಗಂಟೆ 10.00ಕ್ಕೆ ಕೋಡಿಂಬಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ.
1. ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಅಂಗನವಾಡಿ ಕೇಂದ್ರದ ಬಳಿ- 10.30 ರಿಂದ 11.00
2. ಕೋಡಿಂಬಾಡಿ ಗ್ರಾಮದ ಪಣಿತೋಟ ಈಶ್ವರ ಗೌಡ ಇವರ ಮನೆ ಬಳಿ– 11.45 ರಿಂದ 12.15
3. ಕೋಡಿಂಬಾಡಿ ಗ್ರಾಮದ ಪಶು ಚಿಕಿತ್ಸಾ ಕೇಂದ್ರದ ಬಳಿ- 12.30 ರಿಂದ 1.00
4. ಬೆಳ್ಳಿಪಾಡಿ ಗ್ರಾಮದ ಕೊಡಿಮರ ಲಕ್ಷ್ಮೀಶ ಇವರ ಅಂಗಡಿಯ ಹಾಲಿನ ಸೊಸೈಟಿ ಬಳಿ10.30 ರಿಂದ 11.00
5. ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಂಘದ ಕಟ್ಟಡದ ಬಳಿ – 11.45 ರಿಂದ 12.15
6. ಬೆಳ್ಳಿಪ್ಪಾಡಿ ಗ್ರಾಮದ ಕೋಡಿ ಶೀನಪ್ಪ ಪೂಜಾರಿ ಇವರ ಅಂಗಡಿಯ ಬಳಿ – 12.30 ರಿಂದ 1.00