ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಿಶೇಷ ವರದಿ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ. ವೀಣಾ ಸಂತೋಷ್ ರೈ ಅವರಿಂದ ಚಿನ್ನದ ಕವಚ ಸಮರ್ಪಣೆ ಮೂಲಕ ಪತಿಯ ಸಂಕಲ್ಪ ಈಡೇರಿಸಿದ ಪತ್ನಿPublished
10 months agoon
By
Akkare Newsಪುತ್ತೂರು: ಕೊಲ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶ್ರೀ ದೇವರಿಗೆ ಚಿನ್ನದ ಕವಚವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಅವರ ಪತ್ನಿ ಡಾ. ವೀಣಾ ಸಂತೋಷ್ ರೈ ಸಮರ್ಪಿಸಿದ್ದಾರೆ. ಪತಿಯ ಆಶಯದಂತೆ ಈ ಸೇವೆ ನೀಡಲಾಗಿದೆ.ಸೇವೆಯನ್ನು ಬುಧವಾರ ಸಂತೋಷ್ ಕುಮಾರ್ ರೈ ಅವರು ಪತ್ನಿ ಮಗಳು ಸಮೇತರಾಗಿ ಶ್ರೀ ದೇವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ನಿ ನಮ್ಮ ಮದುವೆಯಾದ ಸಂದರ್ಭದಲ್ಲಿ ಇದೊಂದು ಸಣ್ಣ ದೇವಸ್ಥಾನವಾಗಿತ್ತು. ಬಳಿಕದ ದಿನಗಳಲ್ಲಿ ಇಲ್ಲಿ ಅಭಿವೃದ್ಧಿಯಾಗುತ್ತಲೇ ಬಂದಿದೆ. ನನ್ನ ಪತಿಯು ಭಕ್ತರನ್ನು ಒಗ್ಗೂಡಿಸಿಕೊಂಡು ದೇವಸ್ಥಾನದ ಅಭಿವೃದ್ಧಿ ಮಾಡುತ್ತಾ ಪ್ರಸಕ್ತ ಬ್ರಹ್ಮಕಲಶೋತ್ಸವದಲ್ಲಿ ನಾವೆಲ್ಲ ಇದ್ದೇವೆ.
ಶ್ರೀ ಸುಬ್ರಹ್ಮಣ್ಯ ದೇವರು ನಮ್ಮ ಇಷ್ಠಾರ್ಥಗಳನ್ನು ಈಡೇರಿಸುತ್ತಾ ಬಂದಿದ್ದಾರೆ. ಈ ನಡುವೆ ನನ್ನ ಪತಿಯು ದೇವರಿಗೆ ಚಿನ್ನದ ಕವಚ ನೀಡುವ ತನಕ ತಾನು ಚಿನ್ನ ಧರಿಸುವುದಿಲ್ಲ ಎಂದು ಸಂಕಲ್ಪ ಮಾಡಿಕೊಂಡಿದ್ದರು.
ಪತಿಯು ಮದುವೆಯಾದ ಬಳಿಕ ನನಗೆ ಶಿಕ್ಷಣ ನೀಡಿ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅವರ ಸಂಕಲ್ಪದಂತೆ ನನ್ನ ಸ್ವಂತ ಹಣದಿಂದ ಚಿನ್ನದ ಕವಚವನ್ನು ದೇವರಿಗೆ ಸಮರ್ಪಿಸಿದ್ದೇವೆ. ಅಲ್ಲದೆ ಪತಿಗೆ ಚಿನ್ನದ ಸರವನ್ನು ನೀಡಿದ್ದೇನೆ ಎಂದರು.ಸಂತೋಷ್ ಕುಮಾರ್ ರೈ ಅವರ ತಾಯಿ ಗಿರಿಜಾ ರೈ ನಳೀಲು ಅವರು ದೇವರಿಗೆ ಚಿನ್ನದ ಮೋಹನ ಮಾಲೆ ಸಮರ್ಪಿಸಿದರು.