ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕೆದಂಬಾಡಿ ಗ್ರಾಪಂ ವ್ಯಾಪ್ತಿಯಲ್ಲಿ ೫೫ ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ ಸರಕಾರದ ಗ್ಯಾರಂಟಿಗಳನ್ನು ಮನೆ ಬಾಗಿಲಿಗೆ ತಲುಪಿಸಿ, ಕಾರ್ಯಕರ್ತರಿಗೆ ಅಶೋಕ್ ರೈ ಕರೆ

Published

on

ಪುತ್ತೂರು: ಸರಕಾರ ಜನರಿಗೆ ಏನು ಕೊಟ್ಟಿದೆ ಎಂದು ಕೇಳುವವರಿಗೆ ಈಗ ಉತ್ತರ ಕೊಡಬೇಕಾದ ಕಾಲ ಬಂದಿದೆ. ಸರಕಾರ ಜನರಿಗೆ ಕೊಟ್ಟಿರುವ ೫ ಗ್ಯಾರಂಟಿಗಳ ವಿಚಾರವನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕಾಗಿದೆ. ಕಾಂಗ್ರೆಸ್ ಸರಕಾರ ಏನು ಕೊಟ್ಟಿದೆ ಎಂದು ಕೇಳುವವರ ಮುಂದೆ ೫ ಗ್ಯಾರಂಟಿಗಳನ್ನು ಕೊಟ್ಟಿದೆ ಎಂದು ಎದೆ ತಟ್ಟಿ ಹೇಳಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.


ಅವರು ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ೫೫ ಲಕ್ಷ ರೂಪಾಯಿ ವೆಚ್ಚದ ವಿವಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇದ್ಪಾಡಿ ಅಂಗನವಾಡಿ ಕೇಂದ್ರದ ಬಳಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.ರಾಜ್ಯ ಸರಕಾರ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಇಂದು ಕೇಂದ್ರ ಸರಕಾರ ಕೂಟ ಅನುಕರಣ ಮಾಡ ಹೊರಟಿದ್ದು ಈಗಾಗಲೇ ಕೆಲವು ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದೆ ಎಂದು ಅಶೋಕ್ ರೈಯವರು, ಈ ಹಿಂದೆ ಜನರು ನಮ್ಮ ಹತ್ತಿರ ಪ್ರಶ್ನೆ ಮಾಡುತ್ತಿದ್ದರು ಸರಕಾರ ನಮಗೆ ಏನು ಕೊಟ್ಟಿದೆ.

ಚುನಾಚವಣೆ ಹತ್ತಿರ ಬಂದಾಗ ಮನೆ ಬಾಗಿಲಿಗೆ ಬಂದು ಓಟು ಕೇಳುತ್ತಿರಿ ಆ ಬಳಿಕ ನಮ್ಮನ್ನು ಮರೆತು ಬಿಡುತ್ತೀರಿ ನಮಗಾಗಿ ಏನನ್ನು ಕೊಟ್ಟಿಲ್ಲ ಎಂದು ಆದರೆ ಇಂದು ಈ ರೀತಿ ಪ್ರಶ್ನೆ ಮಾಡುವವರ ಮುಂದೆ ಎದೆ ತಟ್ಟಿಕೊಂಡು ಹೇಳಿ ಸರಕಾರ ನಮಗಾಗಿ ೫ ಗ್ಯಾರಂಟಿಗಳನ್ನು ಕೊಟ್ಟಿದೆ. ಈ ಗ್ಯಾರಂಟಿ ವಿಷಯಗಳು ಪ್ರತಿಯೊಬ್ಬರ ಮನೆಗೂ ತಲುಪಬೇಕು ಈ ಬಗ್ಗೆ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಪಕ್ಷ ಬಿಟ್ಟು ಮನುಷ್ಯತ್ವ ನೋಡಿ ಸಹಾಯ ಮಾಡಿ ಈಗಾಗಲೇ ರಾಜ್ಯದ ಸಿದ್ದರಾಮಯ್ಯ ನೇತೃತ್ವ ಸರಕಾರ ಬಹಳಷ್ಟು ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದಿದೆ.ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಇದರಿಂದ ಮುಂದೆ ಬರುವ ಲೋಕಸಭಾ ಚುನಾವಣೆ ಹಾಗೇ ಜಿಪಂ,ತಾಲೂಕು ಪಂಚಾಯತ್ ಚುನಾವಣೆಗಳಿಗೆ ಇದು ಸಹಾಯವಾಗುತ್ತದೆ. ಇದನ್ನು ಕಾರ್ಯಕರ್ತರು ಮಾಡಬೇಕಾಗಿದೆ. ಪಕ್ಷ, ಜಾತಿ, ಧರ್ಮ ಎಲ್ಲವನ್ನು ಬಿಟ್ಟು ಮನುಷ್ಯತ್ವದ ಕಡೆಗೆ ನೋಡಿಕೊಂಡು ಸಹಾಯ ಮಾಡಿ, ಪ್ರೀತಿಯಿಂದ ಸಹಾಯ ಮಾಡಿ ಇದರಿಂದ ನಮಗೂ ಒಳ್ಳೆಯದು ಅಲ್ಲದೆ ನಮ್ಮನ್ನು ಎತ್ತರಕ್ಕೆ ಏರಿಸುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕರಾಗಿ ೮ ತಿಂಗಳಲ್ಲಿ ತಾಲೂಕಿಗೆ ೧೪೭೬ ಕೋಟಿ ರೂಪಾಯಿಗಳ ಅನುದಾನವನ್ನು ತಂದಿರುವ ಏಕೈಕ ಶಾಸಕರಿದ್ದರೆ ಅದು ಅಶೋಕ್ ಕುಮಾರ್ ರೈ ಆಗಿದ್ದಾರೆ. ಇವರ ಸಾಧನೆ ಹಾಗೇ ಸರಕಾರದ ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು. ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರುರವರು ಸ್ವಾಗತಿಸಿ, ಶಾಸಕ ಅಶೋಕ್ ಕುಮಾರ್ ರೈಯವರಿಗೆ ಶಾಲು ಹೊದಿಸಿ ಅಭಿನಂದಿಸಿದರು. ಕೆದಂಬಾಡಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.






ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕ ಘಟಕ ಪುತ್ತೂರು ಬ್ಲಾಕ್‌ನ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಕೆದಂಬಾಡಿ ವಲಯ ಉಸ್ತುವಾರಿ ಕುಂಬ್ರ ದುರ್ಗಾಪ್ರಸಾದ್ ರೈ, ಅಲ್ಪಸಂಖ್ಯಾತರ ಘಟಕ ಪುತ್ತೂರು ಬ್ಲಾಕ್ ಉಪಾಧ್ಯಕ್ಷ ಇಸ್ಮಾಯಿಲ್ ಗಟ್ಟಮನೆ, ೧೮೫ ನೇ ಬೂತ್ ಅಧ್ಯಕ್ಷ ಅಬ್ದುಲ್ಲಾ ಹಾಜಿ, ಕೆದಂಬಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಅಸ್ಮಾ ಗಟ್ಟಮನೆ, ೧೮೪ ನೇ ಬೂತ್ ಅಧ್ಯಕ್ಷ ಭಾಸ್ಕರ್ ನಾಯ್ಕ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮನೋಹರ್ ರೈ ಎಂಡೆಸಾಗು, ರೈ ಎಸ್ಟೇಟ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯ ಸುಧಾಕರ ಪಾಟಾಳಿ, ರಿಯಾಜ್ ಗಟ್ಟಮನೆ, ಬ್ಲಾಕ್ ಕಾರ್ಯದರ್ಶಿ ಹಬೀಬ್ ಕಣ್ಣೂರು, ಹಿರಿಯ ಕಾಂಗ್ರೆಸ್ ಮುಖಂಡ ಬೋಳೋಡಿ ಚಂದ್ರಹಾಸ ರೈ, ಕೆದಂಬಾಡಿ ಗ್ರಾಪಂ ಸದಸ್ಯೆ ಅಸ್ಮಾ ಗಟ್ಟಮನೆ, ಸದಸ್ಯೆ ಸುಜಾತ ರೈ, ಮಾಜಿ ಸದಸ್ಯೆ ಚಂದ್ರಾವತಿ ರೈ ಚಾವಡಿ, ಬೂತ್ ಅಧ್ಯಕ್ಷ ಸೀತಾರಾಮ ರೈ, ರೇಷ್ಮಾ ಮೆಲ್ವಿನ್, ಇಬ್ರಾಹಿಂ ಬೆದ್ರಗುರಿ, ಅಬೂಬಕ್ಕರ್ ಸಾರೆಪುಣಿ, ಹೈದರ್ ಗಟ್ಟಮನೆ, ಸಮದ್ ಇದ್ಪಾಡಿ, ಆಲಿಕುಂಞ ಇದ್ಪಾಡಿ, ಆಶಿಫ್ ಜಿ, ಬಾತೀಶ, ಹನೀಫ್ ಟಿ.ಕೆ, ಮೊದು ಕುಂಞ, ಸಿ.ಎಂ.ಇಬ್ರಾಹಿಂ, ಮಹಮ್ಮದ್ ಸಂತೋಷ್, ಸೋಮಯ್ಯ ತಿಂಗಳಾಡಿ, ಸಾಬು ಹಾಜಿ ಗಟ್ಟಮನೆ, ಸಿರಾಜ್ ಇದ್ಪಾಡಿ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದೀಕ್ ಸುಲ್ತಾನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ, ಭೂನ್ಯಾಯ ಮಂಡಳಿಯ ಸದಸ್ಯ ಕೃಷ್ಣ ಪ್ರಸಾದ್ ಆಳ್ವ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ರೂ.೫೫ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ
ಕಟ್ಟತ್ತಾರು ನಿಡ್ಯಾಣ ರಸ್ತೆ ಅಭಿವೃದ್ಧಿ- ರೂ.೨೦ ಲಕ್ಷ, ತ್ಯಾಗರಾಜೆ ಆದ್ರೋಡಿ ರಸ್ತೆ ಅಭಿವೃದ್ಧಿ- ರೂ.೫,೦೫ ಲಕ್ಷ, ಇದ್ಪಾಡಿ ಅಂಗನವಾಡಿ ಎದುರುಗಡೆ ರಸ್ತೆ ಅಭಿವೃದ್ಧಿ-ರೂ.೫.೦೫ ಲಕ್ಷ, ತಿಂಗಳಾಡಿ ದರ್ಬೆ-ಮಸೀದಿ ಬಳಿ ರಸ್ತೆ ಅಭಿವೃದ್ಧಿ-ರೂ.೫.೦೫ ಲಕ್ಷ, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ರಸ್ತೆ ಅಭಿವೃದ್ಧಿ -ರೂ.೫.೦೫ ಲಕ್ಷ, ಕೆದಂಬಾಡಿ ಪೊಟ್ಟಮೂಲೆ ಬಾಳಯ ಎಸ್.ಟಿ ಕಾಲನಿ ರಸ್ತೆ ಅಭಿವೃದ್ಧಿ – ರೂ.೫.೦೫ ಲಕ್ಷ ಹಾಗೂ ಕೆದಂಬಾಡಿ ಕುಯ್ಯಾರು ಗಟ್ಟಮನೆ ಅಲ್ಪ ಸಂಖ್ಯಾತರ ಕಾಲನಿ ರಸ್ತೆ ಅಭಿವೃದ್ಧಿ -ರೂ.೧೦ ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳ್ಳಲಿದ್ದು ಈ ಕಾಮಗಾರಿಗಳಿಗೆ ಶಾಸಕರಾದ ಅಶೋಕ್ ಕುಮಾರ್ ರೈಯವರು ಗುದ್ದಲಿಪೂಜೆ ನೆರವೇರಿಸಿದರು.

ಕಾಮಗಾರಿ ಪೂರ್ಣಗೊಂಡ ರಸ್ತೆಗಳು
ರೂ.೧೫ ಲಕ್ಷ ವೆಚ್ಚದಲ್ಲಿ ಕಟ್ಟತ್ತಾರು ನಿಡ್ಯಾಣ ರಸ್ತೆ ಅಭಿವೃದ್ದಿ, ರೂ.೧೦ ಲಕ್ಷ ವೆಚ್ಚದಲ್ಲಿ ಕಟ್ಟತ್ತಾರು ನಿಡ್ಯಾಣ ಎಸ್.ಸಿ ಕಾಲನಿ ರಸ್ತೆ ಅಭಿವೃದ್ಧಿ ಹಾಗೂ ರೂ.೪ ಲಕ್ಷ ವೆಚ್ಚದಲ್ಲಿ ಕೆದಂಬಾಡಿ ತ್ಯಾಗರಾಜೆ ಬೀಡು ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.

ಕೆದಂಬಾಡಿ ಗ್ರಾಮಕ್ಕೆ ರೂ.೮೪ ಲಕ್ಷದ ೨೫ ಸಾವಿರ ಅನುದಾನ
ಅಭಿವೃದ್ಧಿ ಪರ ಚಿಂತನೆಯನ್ನು ಹೊಂದಿರುವ ಶಾಸಕ ಅಶೋಕ್ ಕುಮಾರ್ ರೈಯವರು ತನ್ನ ಶಾಸಕತ್ವದ ಮೊದಲ ಅವಧಿಯಲ್ಲಿ ಕೆದಂಬಾಡಿ ಗ್ರಾಮಕ್ಕೆ ಬರೋಬ್ಬರಿ ೮೪ ಲಕ್ಷದ ೨೫ ಸಾವಿರ ರೂಪಾಯಿಗಳ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ತಾನು ಶಾಸಕನಾದ ಕೇವಲ ೮ ತಿಂಗಳಲ್ಲಿ ಗ್ರಾಮಕ್ಕೆ ಇಷ್ಟೊಂದು ಮೊತ್ತದ ಅನುದಾನವನ್ನು ಒದಗಿಸಿಕೊಡುವ ಮೂಲಕ ಗ್ರಾಮದ ಅಭಿವೃದ್ದಿಗೆ ತನ್ನ ಮೊದಲ ಕೊಡುಗೆ ನೀಡಿದ್ದಾರೆ.

೯ ತಿಂಗಳು ೧೪೭೬ ಕೋಟಿ ರೂ ಅನುದಾನ
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರ ಬಂದು ೯ ತಿಂಗಳು ಆಗುತ್ತಾ ಬಂದಿದ್ದು ಈ ಅವಧಿಯಲ್ಲಿ ಪುತ್ತೂರು ತಾಲೂಕಿಗೆ ೧೪೭೬ ಕೋಟಿ ರೂಪಾಯಿ ಅನುದಾನವನ್ನು ತರಲಾಗಿದೆ. ಈ ಹಿಂದಿನ ಯಾವ ಸರಕಾರ, ಶಾಸಕರೂ ಮಾಡದ ಕೆಲಸವನ್ನು ಶಾಸಕ ಅಶೋಕ್ ಕುಮಾರ್ ರೈಯವರು ಮಾಡಿ ತೋರಿಸಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Advertisement