ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
200 ಕಟ್ಟಡ ಕಾರ್ಮಿಕರಿಗೆ ಕಾರ್ಪೆಂಟರ್ ಕಿಟ್ ವಿತರಣೆ ಕಾರ್ಮಿಕ ವರ್ಗಕ್ಕೆ ಸರಕಾರದಿಂದ ಅಭೂತಪೂರ್ವ ಸೌಲಭ್ಯಗಳು ದೊರೆಯುತ್ತಿದೆ: ಅಶೋಕ್ ರೈPublished
2 years agoon
By
Akkare News
ಪುತ್ತೂರು: ಸರಕಾರ ಪ್ರತೀ ಕುಟುಂಬಕ್ಕೆ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದರೂ ಕಾರ್ಮಿಕ ವರ್ಗಕ್ಕೆ ನೀಡುವ ಸೌಲಭ್ಯವನ್ನು ಕಡಿತ ಮಾಡಿಲ್ಲ ,ಕಾರ್ಮಿಕರಿಗೆ ವಿವಿಧ ಸೌಲಭ್ಯವನ್ನು ನೀಡುವ ಮೂಲಕ ಕಾರ್ಮಿಕ ಕುಟುಂಬಕ್ಕೆ ದಾರಿ ದೀಪವಾಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರುಶಾಸಕರ ಕಚೇರಿಯಲ್ಲಿ ಕಾರ್ಪೆಂಟರ್ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿದರು.
ಕಾರ್ಮಿಕ ವರ್ಗವನ್ನು ಸರಕಾರ ಎಂದೂ ಕಡೆಗಣಿಸುವುದಿಲ್ಲ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಗಳ ಮದುವೆಗೆ ಸಹಾಯಧನ, ಆರೋಗ್ಯ ಸೇವೆ ಸೇರಿದಂತೆ ಎಲ್ಲಾ ವಿಧ ಸೌಲಭ್ಯಗಳು ರಾಜ್ಯ ಸರಕಾರದಿಂದ ದೊರೆಯುತ್ತಿದೆ.






ಎಲ್ಲಾ ಕಾರ್ಮಿಕ ವರ್ಗದ ಕುಟುಂಬಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಶಾಸಕರುಮನವಿ ಮಾಡಿದರು. ಶಾಸಕರ ಕಚೇರಿಯಲ್ಲೇ ಕಾರ್ಮಿಕರ ಕಾರ್ಡು ನೋಂದಣಿಯನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ. ಕಾರ್ಡುಮಾಡಿಕೊಳ್ಳದ ಕಾರ್ಮಿಕರು ಮಾಡಿಸಿಕೊಳ್ಳುವಮೂಲಕಸರಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಕಾರ್ಮಿಕ ಅಧಿಕಾರಿ ಗಣಪತಿ ಹೆಗ್ಡೆ,ರೈಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದಸುದೇಶ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಕಾರ್ಮಿಕ ಯೂನಿಯನ್ ಘಟಕದ ಅಧ್ಯಕ್ಷರುಗಳಾದ ಪುರಂದರ್ ರೈ ಹಾಗೂ ಆಶ್ರಫ್ ಉಪಸ್ಥಿತರಿದ್ದರು.