ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಸಾರ್ವಜನಿಕ ಸ್ಥಳದಲ್ಲಿ ಬಿತ್ತಿ ಪತ್ರ ಅಂಟಿಸಿದರೆ ದಂಡ: ಶಾಸಕರ ಆದೇಶ ನಾಳೆಯಿಂದ ಚಾಲನೆPublished
9 months agoon
By
Akkare Newsಪುತ್ತೂರು: ಪುತ್ತೂರು ನಗರದಾಧ್ಯಂತ ಸಾರ್ವಜನಿಕ ಸ್ಥಳಗಳಲ್ಲಿ , ಗೋಡೆಗಳ ಮೇಲೆ ಭಿತ್ತಿ ಪತ್ರ ಅಂಟಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪುತ್ತೂರು ನಗರದ ಸೌಂಧರ್ಯವನ್ನು ಕಾಪಾಡುವ ಕೆಲಸವನ್ನು ನಗರಸಭೆ ಕೈಗೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ನಗರಸಭಾ ಆಯುಕ್ತರಿಗೆ ಸೂಚನೆಯನ್ನು ನೀಡಿದ್ದಾರೆ.
ಪುತ್ತೂರು ನಗರದಾಧ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ರೈಲ್ವೇ ಅಂಡರ್ ಪಾಸ್ ಬಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಭಿತ್ತಿ ಪತ್ರವನ್ನು ಅಂಟಿಸಿ ನಗರದ ಸೌಂಧರ್ಯಕ್ಕೆ ಧಕ್ಕೆ ತಂದಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರು ಆಯುಕ್ತರಿಗೆ ಸೂಚನೆಯನ್ನು ನೀಡಿ ನಾಳೆಯಿಂದಲೇ ( ಎ.1) ಲೇ ಕಾರ್ಯಾಚರಣೆ ನಡೆಸಿ ಎಲ್ಲಾ ಭಿತ್ತಿ ಪತ್ರಗಳನ್ನು ತೆರವುಮಾಡಿ ಅಂಥವರಿಗೆ ದಂಢ ವಿಧಿಸುವಂತೆ ಸೂಚಿಸಿದ್ದಾರೆ. ಈಗಾಗಲೇ ನಗರದೆಲ್ಲೆಡೆ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರವನ್ನು ಅಂಟಿಸಿದ್ದು ಬಹುತೇಕ ಅನಧಿಕೃತವಾಗಿದ್ದು ಮಾತ್ರವಲ್ಲದೆ ನಗರದ ಸೌಂಧರ್ಯಕ್ಕೆ ಹಾನಿಯುಂಟುಮಾಡಿರುತ್ತದೆ.
ಕೋಟ್…
ಪುತ್ತೂರುನಗರದ ಸೌಂಧರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಗರಸಭಾ ಆಯುಕ್ತರಿಗೆ ಸೂಚನೆಯನ್ನುನೀಡಲಾಗಿದ್ದು ಎ.1 ರಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ. ನಗರದ ಸೌಂಧರ್ಯ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರುಸಹಕಾರ ನೀಡಬೇಕು.
ಅಶೋಕ್ ರೈ ಶಾಸಕರು ಪುತ್ತೂರು