Published
9 months agoon
By
Akkare Newsಸದಾ ಸೇವೆಯಲ್ಲಿ ತನ್ನನ್ನು ತಾನು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ವಿಭಿನ್ನ ಶೈಲಿಯ ಸಾಮಾಜಿಕ ಶೈಕ್ಷಣಿಕ ಕ್ರೀಡಾ ಶಿಕ್ಷಣ ಕೆಲಸಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ರಾಜ ಕೇಸರಿ ಸಂಘಟನೆಯ 547 ಸೇವಾ ಯೋಜನೆ ಪ್ರಯುಕ್ತ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಲೀಲಾವತಿ ಅವರ ಹೊಸ ಮನೆ ಮೈರಾರು ಓಡಿಲ್ನಳ ಗ್ರಾಮ.
ಇವರ ಮನೆಯ ವೈರಿಂಗ್ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು. ಅದನ್ನು ಪೂರ್ಣಗೊಳಿಸಿ ಇವತ್ತು ಅವರಿಗೆ ಹಸ್ತಾಂತರಿಸಲಾಯಿತು .
ಮನೆಯ ಸಂಪೂರ್ಣ ವೈರಿಂಗ್ ಕೆಲಸ ಮತ್ತು ಖರ್ಚು ವೆಚ್ಚಗಳನ್ನು ಲೋಬೊ ಟವರ್ಸ್ ನಲ್ಲಿರುವ ಶ್ರೀ ಗಣೇಶ್ ಎಲೆಕ್ಟ್ರಿಕಲ್ಸ್ ಕೆ ಬಿ ರೋಡ್. ಇದರ ಮಾಲಕರಾದ ಯಜ್ಞೇಶ್ ರೈ. ಇವರ ಉಚಿತವಾಗಿ ಮಾಡಿಕೊಟ್ಟಿದ್ದಾರೆ .
ಈ ದಿನದ ಹುಟ್ಟುಹಬ್ಬವನ್ನು ಲೀಲಾವತಿಯವರ ಹೊಸ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ.ರಾಜ ಕೇಸರಿ ಸಂಘಟನೆ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಷನ್.ರಾಜ ಕೇಸರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ.ಸದಸ್ಯರುಗಳಾದ ದೇವರಾಜ್, ಸಂದೇಶ್, ಶ್ರೀನಿವಾಸ್ಮಂಜೊಟ್ಟಿ ಇವರು ಉಪಸ್ಥಿತರಿದ್ದರು.