ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಉದ್ಯೋಗ ಕರ್ನಾಟಕ ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಾಮಾನ್ಯ
“ಬೆಂಗಳೂರು ಮಹಾನಗರ” ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಕಂಡಕ್ಟರ್ ಹುದ್ದೆಗಳ ನೇಮಕಾತಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೊಸ ಅಧಿಸೂಚನೆಯನ್ನು ಬಿಡುಗಡೆPublished
9 months agoon
By
Akkare News“ಬೆಂಗಳೂರು ಮಹಾನಗರ” ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಕಂಡಕ್ಟರ್ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಕೆಯ ದಿನಾಂಕಗಳನ್ನು ಬದಲಾವಣೆ ಮಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವು ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
“ಬೆಂಗಳೂರು ಮಹಾನಗರ” ಸಾರಿಗೆ ಸಂಸ್ಥೆಯಲ್ಲಿ ಇರುವಂತಹ ಬಸ್ ಕಂಡಕ್ಟರ್ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ನೇಮಕಾತಿಗಾಗಿ ಸಂಬಂಧಿಸಿದ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ , ವಯೋಮಿತಿ,ವಿವರ ,ಸಂಬಳ, ಹಾಗೂ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಮತ್ತು ಅಧಿಕೃತ ಅಧಿಸೂಚನೆ ಎಲ್ಲಾ ಮಾಹಿತಿಯನ್ನು ಈ ಕೆಳಗಿನ ನೀಡಲಾಗಿದೆ.
ಅರ್ಜಿ ಸಲ್ಲಿಕೆ:-
KPSC ಹೊರಡಿಸಿರುವ ಗೆಜೆಟೆಡ್ ಪ್ರೊಬೆಶನಲ್ ಹುದ್ದೆ ಅಧಿಸೂಚನೆ 2024… ಇಂದೇ ಅರ್ಜಿ ಸಲ್ಲಿಸಿ
August 11, 2023 ಮೊದಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು 09-10-2024 ಮಾರ್ಚ್ ರಿಂದ ಏಪ್ರಿಲ್ 10 ರ ವರೆಗೆ ದಿನಾಂಕವನ್ನು ನಿಶ್ಚಯಪಡಿಸಲಾಗಿತ್ತು.
ಹಲವಾರು ಕಾರಣಗಳಿಂದಾಗಿ ಅರ್ಜಿ ಸಲ್ಲಿಕೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಏಪ್ರಿಲ್ 19, 2024 ಮೇ 18, 2024ರ ವರೆಗೆ ಅವಕಾಶವನ್ನು ನೀಡಲಾಗಿದೆ.
ಹುದ್ದೆಗಳ ವಿವರ :-
* ಒಟ್ಟು ಖಾಲಿ ಹುದ್ದೆಗಳು: 2,500 ಹುದ್ದೆಗಳು.
* ನೇಮಕಾತಿ ಇಲಾಖೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ.
* ಹುದ್ದೆಯ ಹೆಸರು: ಬಸ್ ನಿರ್ವಾಹಕ (ಬಸ್ ಕಂಡಕ್ಟರ್)
* ಉದ್ಯೋಗದ ಸ್ಥಳ: ಬೆಂಗಳೂರು
* ಅರ್ಜಿ ಸಲ್ಲಿಕೆ: ಆನ್ಲೈನ್ ಗಳ ಮುಖಾಂತರ
ಖಾಲಿ ಹುದ್ದೆಗಳ ವಿವರ:-
* ಸ್ಥಳೀಯ ವೃಂದದ ಹುದ್ದೆಗಳು: 214
* ಮಿಕ್ಕುಳಿದ ವೃಂದದ ಹುದ್ದೆಗಳು: 2,286
ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು ?.ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ:-
ಬಸ್ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು,ಕನಿಷ್ಠ 18 ವರ್ಷ ಪೂರೈಸಬೇಕು. ಹಾಗೂ ವರ್ಗಗಳ ಅನುಸಾರ ಗರಿಷ್ಠ ವಯಸ್ಸಿನ ಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷ
* 2a, 2b, 3a, 3b ಅಭ್ಯರ್ಥಿಗಳಿಗೆ : 38 ವರ್ಷ
* ಎಸ್ಸಿ /ಎಸ್ಟಿ /ಪ್ರವರ್ಗ 1 ಅಭ್ಯರ್ಥಿಗಳಿಗೆ : 40 ವರ್ಷ
* ಮಾಜಿ ಸೈನಿಕರಿಗೆ : 45 ವರ್ಷ
ಅರ್ಜಿ ಶುಲ್ಕದ ವಿವರ:-
* 2a, 2b, 3a, 3b ಅಭ್ಯರ್ಥಿಗಳಿಗೆ : ರೂ.750
* ಎಸ್ಸಿ /ಎಸ್ಟಿ /ಪ್ರವರ್ಗ 1 ಮಾಜಿ ಸೈನಿಕರಿಗೆ, ಅಂಗವಿಕಲ ಅಭ್ಯರ್ಥಿಗಳಿಗೆ : ರೂ.500
ವೇತನ ಶ್ರೇಣಿ:-
18.660 ರಿಂದ 25.300 ₹
ಪರೀಕ್ಷಾ ಕೇಂದ್ರಗಳು:-
ಬೆಂಗಳೂರು
ಮೈಸೂರು
ಶಿವಮೊಗ್ಗ
ಬೆಳಗಾವಿ
ಧಾರವಾಡ
ಬಳ್ಳಾರಿ
ಬೀದರ್
ಕೊಪ್ಪಳ
ತುಮಕೂರು
ದಾವಣಗೆರೆ
ದಕ್ಷಿಣ ಕನ್ನಡ
ರಾಯಚೂರು
ಕಲಬುರ್ಗಿ
ದೇಹದಾರ್ಢ್ಯತೆ:-
ಪುರುಷ ಅಭ್ಯರ್ಥಿಗಳಿಗೆ:
ಕನಿಷ್ಠ ಎತ್ತರ: 160 ಸೆಂ.ಮೀ.
ಮಹಿಳಾ ಅಭ್ಯರ್ಥಿಗಳಿಗೆ:
ಕನಿಷ್ಠ ಎತ್ತರ: 150 ಸೆಂ.ಮೀ.
ವೇತನದ ಜೊತೆಗೆ, ಈ ಕೆಳಗಿನ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ:-
ಉಚಿತ ಬಸ್ ಪಾಸ್
ಉಚಿತ ವೈದ್ಯಕೀಯ ಸೌಲಭ್ಯಗಳು
ಪಿಂಚಣಿ ಯೋಜನೆ
ಉತ್ಸವ ಭತ್ಯೆ
ಇತರ ಸೌಲಭ್ಯಗಳು
ಅರ್ಜಿ ಸಲ್ಲಿಸಲು ದಿನಾಂಕ:-
* ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 19-04-2024
* ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 18-05-2024.
ಅಧಿಸೂಚನೆ ಲಿಂಕ್ RPC:-
https://drive.google.com/file/d/1GL3Eevd9Z-E67lScke0_Bv5-slvigiYc/view
ಅಧಿಸೂಚನೆ ಲಿಂಕ್ KK:-
https://drive.google.com/file/d/1UMQQN5tmnQDrVJln3EPcWMnQMogv52lm/view
ಅರ್ಜಿ ಸಲ್ಲಿಸುವ ಲಿಂಕ್:-
https://cetonline.karnataka.gov.in/kea/kbknrk2023