Published
9 months agoon
By
Akkare Newsಯುಗಾದಿ ಹಬ್ಬದ ಜೊತೆ ಸಾಲು ಸಾಲು ರಜೆ ಸೇರಿದ್ದು, ತಮ್ಮ ತಮ್ಮ ಊರಿಗೆ ಹೋಗೋ ಯೋಚನೆಯಲ್ಲಿ ಇರುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ.
ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ರೈಲು ಟಿಕೆಟ್‌ಗಳು ಬುಕ್ ಆಗಿದ್ದು, ಜನ ಬಸ್‌ನಲ್ಲಿ ಓಡಾಟ ನಡೆಸುವ ಬಗ್ಗೆ ಆಲೋಚಿಸಿದ್ದಾರೆ.
ಇದಕ್ಕಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆ ಯುಗಾದಿಗಾಗಿ ಹೆಚ್ಚುವರಿ ಬಸ್ ಸೇವೆ ನೀಡಲು ಮುಂದಾಗಿದೆ. ಜನರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಎರಡು ಸಾವಿರಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ.
ಕೆಎಸ್‌ಆರ್‌ಟಿಸಿಯಿಂದ 1,750ಬಸ್, NWKSRTCಯಿಂದ 145 ಬಸ್ ಸೇವೆ ಹಾಗೂ ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ.
ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಬರುತ್ತದೆ. ಒಂದು ದಿನ ಕಳೆದರೆ ಗುರುವಾರ ರಂಜಾನ್ ರಜೆ ಇದೆ. 13 ರಂದು ಎರಡನೇ ಶನಿವಾರ, 14 ರಂದು ಭಾನುವಾರ ರಜೆ ಸಿಗಲಿದೆ. ಏಪ್ರಿಲ್ 7 ರಿಂದ ಏಪ್ರಿಲ್ 14ರವರೆಗೆ ಬರೊಬ್ಬರಿ 5 ರಜೆಗಳು ಸಿಗುತ್ತವೆ. ಹೀಗಾಗಿ ಕೆಲವರು ವಾರಪೂರ್ತಿ ಆಫೀಸ್‌ಗೆ ರಜೆ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ.