Published
9 months agoon
By
Akkare Newsಪುತ್ತೂರು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಕ್ಕುಡ ದರ್ಬೆಯ ಕಾಲನಿಯಲ್ಲಿಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗಿದ್ದು ನಾಗಕರಿಕರು ತೊಂದರೆ ಗೀಡಾಗಿದ್ದರು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಶಾಸಕರಾದ ಅಶೋಕ್ ರೈ ಅವರಲ್ಲಿ ದೂರು ನೀಡಿದ್ದರು.
ಕೂಡಲೇ ಸ್ಪಂದಿಸಿದ ಶಾಸಕರು ಪಟ್ಟಣ ಪಂಚಾಯತಿ ವತಿಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಸೂಚಿಸಿದ್ದರು. ಆದರೆ ಆ ಬಳಿಕವೂ ಪಟ್ಟಣ ಪಂಚಾಯತ್ ನಿಂದ ಕುಡಿಯುವ ನೀರಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದರು.
ಕಳೆದ ಮೂರು ದಿನಗಳಿಂದ ಮತ್ತೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಭಾಗದಲ್ಲಿ ಸುಮಾರು 180 ಮನೆಗಳಿದ್ದು ನೀರಿಲ್ಲದೆ ಪತದಾಡುವಂತಾಗಿತ್ತು. ಸಮಸ್ಯೆಗೆ ಸ್ಪಂದಿಸಿದ ಶಾಸಕರು ಕಾಲನಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಮಂಜೂರುಮಾಡಿದ್ದು ಕಾಮಗಾರಿ ನಡೆಯುತ್ತಿದೆ.
ನಮ್ಮ ಕಾಲನಿ ನಿವಾಸಿಗಳ ಸಮಸ್ಯೆಗೆ ಶಾಸಕರು ತಕ್ಷಣ ಸ್ಪಂದಿಸಿದ್ದಾರೆ. ಕೊಳವೆ ಬಾವಿ ಮಂಜೂರು ಮಾಡಿದ್ದು ಅದರ ಕೆಲಸ ಆರಂಭವಾಗಿದೆ. ಸ್ಪಂದಿಸಿದ ಶಾಸಕರಿಗೆ ಕೃತಜ್ಞತೆಗಳು ತಿಳಿಸಿದ ಆನಂದ , ಸ್ಥಳೀಯರು