Published
12 months agoon
By
Akkare Newsಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದಲ್ಲಿ ಶ್ರೀ ದೇವರ ಪೇಟೆ ಸವಾರಿ ಸಂದರ್ಭದಲ್ಲಿ ಭಕ್ತರು ರಸ್ತೆಯಲ್ಲಿ ಪಟಾಕಿ ಸಿಡಿಸಿದಲ್ಲಿ ತಕ್ಷಣ ರಸ್ತೆಯನ್ನು ಸ್ವಚ್ಛಗೊಳಿಸುವಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಶ್ರೀ ದೇವರ ಪೇಟೆ ಸವಾರಿ ವೇಳೆ ಭಕ್ತರು ಭಕ್ತಿಪೂರ್ವಕ ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಪಟಾಕಿ ಉರಿದ ಬಳಿಕ ಅದರ ಸಣ್ಣ ಸಣ್ಣ ಕಿಡಿಗಳು ರಸ್ತೆಯಲ್ಲೇ ಹಾಗೆ ಇರುವುದರಿಂದ ಬ್ರಹ್ಮವಾಹಕರಿಗೆ ಮತ್ತು ಅರ್ಚಕರಿಗೆ ಹಾಗು ಶ್ರೀ ದೇವರ ಜೊತೆ ಬರುವ ಭಕ್ತರಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ದೇವರು ಬರುವ ದಾರಿಯಲ್ಲಿ ಪಟಾಕಿ ಸಿಡಿಸಿದ ತಕ್ಷಣ ಅದನ್ನು ಸ್ವಚ್ಚಗೊಳಿಸುವಂತೆ ಅವರು ವಿನಂತಿಸಿದ್ದಾರೆ.