Published
8 months agoon
By
Akkare Newsಪುತ್ತೂರು: ಗೃಹಲಲಕ್ಣ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಕಿ ಇರುವ ಮತ್ತು ಎಪ್ರಿಲ್ ತಿಂಗಳ ಕಂತನ್ನು ತಕ್ಷಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಶಾಸಕರಾದ ಅಶೋಕ್ ರೈ ಯವರು ಮನವಿ ಮಾಡಿದ್ದು ಕಳೆದ ಎರಡು ದಿನಗಳಿಂದ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ.
ಹಣಕಾಸು ಇಲಾಖೆಗೆ ನಿರ್ದೇಶನ ನೀಡುವಂತೆ ಸೋಮವಾರದಂದು ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದರು. ಮಂಗಳವಾರ ಮತ್ತು ಬುಧವಾರ ಕಂತು ಜಮೆಯಾಗಿದೆ. ಕೆಲವರಿಗೆ ಎರಡರಿಂದ ಮೂರು ಕಂತು ಒಂದೇ ಬಾರಿಗೆ ಜಮೆಯಾಗಿದೆ.ಶಾಸಕರ ಮುತುವರ್ಜಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.